ADVERTISEMENT

ಹಾವೇರಿ: ಯೂರಿಯಾ ಗೊಬ್ಬರಕ್ಕೆ ಪರದಾಡಿದ ರೈತರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 16:29 IST
Last Updated 17 ಜುಲೈ 2022, 16:29 IST
ಗುತ್ತಲ ಸಮೀಪದ ಹಾಲಗಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರಿಗೆ ಯೂರಿಯಾ ಗೊಬ್ಬರ ‍ಪಡೆಯಲು ಭಾನುವಾರ ರೈತರು ಸರದಿಯಲ್ಲಿ ನಿಂತಿದ್ದರು
ಗುತ್ತಲ ಸಮೀಪದ ಹಾಲಗಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರಿಗೆ ಯೂರಿಯಾ ಗೊಬ್ಬರ ‍ಪಡೆಯಲು ಭಾನುವಾರ ರೈತರು ಸರದಿಯಲ್ಲಿ ನಿಂತಿದ್ದರು   

ಗುತ್ತಲ: ಇಲ್ಲಿಗೆ ಸಮೀಪದ ಹಾಲಗಿ ಗ್ರಾಮದಲ್ಲಿ ಭಾನುವಾರ ಯೂರಿಯಾ ರಸಗೊಬ್ಬರ ಪಡೆಯಲು ರೈತರು ಮುಗಿಬಿದ್ದಿದ್ದರು.

ಹಾಲಗಿ ಕೃಷಿ ಪತ್ತಿನ ಸಹಕಾರಿ ಸಂಘದ ಎದುರಿಗೆ ಯೂರಿಯಾ ಗೊಬ್ಬರ ಕೊಳ್ಳಲು ರೈತರು ಸಾಲುಗಟ್ಟಿ ನಿಂತಿದ್ದರು. ಸರದಿಯಲ್ಲಿ ಮಕ್ಕಳು ಸೇರಿದಂತೆ ನೂರಾರು ರೈತರು ನಾ ಮುಂದು ನಿ ಮುಂದು ನೂಕಾಟ ತಳ್ಳಾಟವೂ ನಡೆಯಿತು. ಇದರಿಂದ ರೈತರ ಮಧ್ಯ ಮಾತಿನ ಚಕಮಕಿ ಉಂಟಾಯಿತು.

‘ಸಂಘಕ್ಕೆ ಕೇವಲ 340 ಚೀಲ ಯೂರಿಯಾ ಗೊಬ್ಬರ ಬಂದಿತ್ತು. ಅದರಲ್ಲೇ ಅಷ್ಟು ಜನರಿಗೆ ಹಂಚುವುದು ಕಷ್ಟ. ಹೀಗಾಗಿ ಒಬ್ಬರಿಗೆ 5 ಚೀಲದಂತೆ ಕೃಷಿ ಪತ್ತಿನ ಸಹಕಾರಿ ಗೊಬ್ಬರ ವಿತರಣೆ ಮಾಡಲಾಯಿತು. ಕೊನೆ ಗಳಿಗೆಯಲ್ಲಿ ಸರದಿಯಲ್ಲಿ ನಿಂತವರಿಗೆ ಮತ್ತೆ ಯೂರಿಯಾ ಗೊಬ್ಬರ ಬಂದ ನಂತರ ವಿತರಿಸುವ ಭರವಸೆ ನೀಡಲಾಗಿದೆ’ ಎಂದು ಕೃಷಿ ಪತ್ತಿನ ಸಹಕಾರಸಂಘದಕಾರ್ಯದರ್ಶಿ ಪರಸಪ್ಪ ಉಂಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.