ತಡಸ: ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವದ ಅಂಗವಾಗಿ ಸೋಮವಾರ ಯಜುರ್ವೇದ ಸ್ವಾಹಾಕಾರ, ಚತುರ್ವೇದ ಪಾರಾಯಣ, ಋಗ್ವೇದ ಸಂಹಿತಾ ಯಾಗ ಅಥರ್ವಶೀರ್ಷ ಗಣ ಹವನ, ಸುಂದರಕಾಂಡ, ರಾಮಾಯಣ, ಭಾಗವತ , ಪಾರಾಯಣ, ಶತಚಂಡಿಪಾರಾಯಣ, ಅರುಣ ಪ್ರಶ್ನ ಹವನ, ಗಾಯತ್ರಿ ಹವನ, ಮುಂತಾದ ಹೋಮಗಳು ನಡೆದವು.
ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಧರಣೆಂದ್ರ ದಾಸ ಸ್ವಾಮೀಜಿ ಸಭೆಗೆ ಚಾಲನೆ ನೀಡಿದರು.
ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ , ‘ ಎಂದು ಗಾಯಿತ್ರಿ ಇಲ್ಲಿ ಬಂದು ಈ ಕ್ಷೇತ್ರವನ್ನು ತನ್ನ ಆವಾಸಸ್ಥಾನವಾಗಿ ಮಾಡಿಕೊಂಡಳೊ ಅಂದೇ ಈ ಕ್ಷೇತ್ರದ ಬೆಳವಣಿಗೆ ಊರ್ದ್ವ ಕಂಡಿತು’ ಎಂದರು.
ಶಿರಸಿಯ ಉಮಾಕಾಂತ್ ಭಟ್ ಪ್ರವಚನ ನೀಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಚಕ್ರವರ್ತಿ ಸೂಲಿಬೆಲೆ, ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿನಾಯಕ ಪಿ.ಅಕಳವಾಡಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.