ADVERTISEMENT

ವಕೀಲರ ಸಂಘಕ್ಕೆ ಮಹಾಂತಿನಮಠ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:48 IST
Last Updated 21 ಜೂನ್ 2025, 15:48 IST
ಹಾನಗಲ್‌ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಎಂ.ಸಿ,ಮಹಾಂತಿನಮಠ ಅವರು ಮಾತನಾಡಿದರು.
ಹಾನಗಲ್‌ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಎಂ.ಸಿ,ಮಹಾಂತಿನಮಠ ಅವರು ಮಾತನಾಡಿದರು.   

ಹಾನಗಲ್: ಎರಡು ವರ್ಷದ ಅವಧಿಗಾಗಿ ಹಾನಗಲ್ ವಕೀಲರ ಸಂಘದ ಪದಾಧಿಕಾರಿಗಳ 6 ಸ್ಥಾನಗಳಿಗೆ ಚುನಾವಣೆ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಎಂ.ಸಿ.ಮಹಾಂತಿನಮಠ ಚುನಾಯಿತರಾದರು.

ಉಪಾಧ್ಯಕ್ಷರಾಗಿ ರಮೇಶ ತಳವಾರ, ಕಾರ್ಯದರ್ಶಿಯಾಗಿ ಸತೀಶ ತಿಳವಳ್ಳಿ, ಸಹ ಕಾರ್ಯದರ್ಶಿಯಾಗಿ ಎಸ್.ಎಸ್.ಅಕ್ಕಿ, ಕೋಶಾಧ್ಯಕ್ಷರಾಗಿ ಎಸ್.ಬಿ.ಸುಬ್ಬಣ್ಣನವರ, ಗ್ರಂಥಪಾಲಕರಾಗಿ ಕಾಂಚನಾ ಆರೇರ ಚುನಾಯಿತರಾದರು.

ಇಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು. 167 ಮತದಾರರಲ್ಲಿ 164 ಮತಗಳು ಚಲಾವಣೆಗೊಂಡವು. ಬಳಿಕ ಫಲಿತಾಂಶ ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ವಕೀಲ ಎಸ್.ಟಿ.ಕಾಮನಹಳ್ಳಿ ಕಾರ್ಯನಿರ್ವಹಿಸಿದರು. ನೂತನ ಪದಾಧಿಕಾರಿಗಳನ್ನು ವಕೀಲರು ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.