ಹಾನಗಲ್: ಶಾಸಕ ಶ್ರೀನಿವಾಸ ಮಾನೆ ಅವರ ₹ 56 ಸಾವಿರ ವೈಯಕ್ತಿಕ ನೆರವು ಹಾಗೂ ಹಳೆಯ ವಿದ್ಯಾರ್ಥಿಗಳು, ದಾನಿಗಳಿಂದ ಸಂಗ್ರಹ ಮಾಡಿದ ₹56 ಸಾವಿರ ಸೇರಿ ಒಟ್ಟು ₹1.12 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ತಾಲ್ಲೂಕಿನ ಹಸನಾಬಾದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀಡಲಾಯಿತು.
ಎಲ್.ಇ.ಡಿ. ಸ್ಮಾರ್ಟ್ ಟಿವಿ, ಚಾರ್ಜೆಬಲ್ ಬ್ಲೂಟ್ಯೂತ್ ಸ್ಪೀಕರ್, ಮ್ಯಾಗ್ನೆಟಿಕ್ ಗ್ರೀನ್ ಬೋರ್ಡ್ ಮತ್ತು ಶಾಲೆಗೆ ಸುಣ್ಣಬಣ್ಣದ ಸಾಮಗ್ರಿಗಳನ್ನು ಶಾಲೆಯ ಮುಖ್ಯಶಿಕ್ಷಕರಿಗೆ ಶಾಸಕ ಶ್ರೀನಿವಾಸ ಮಾನೆ ಹಸ್ತಾಂತರಿಸಿದರು.
‘ಸರ್ಕಾರದ ಅನುದಾನದ ಅವಶ್ಯಕತೆ ಇಲ್ಲದೇ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ವಿನೂತನ ಪರಿಕಲ್ಪನೆ ತಾಲ್ಲೂಕಿನಲ್ಲಿ ಯಶ ಕಂಡಿದೆ’ ಎಂದರು.
ಮುಖ್ಯಶಿಕ್ಷಕಿ ಸಂಗೀತಾ ಎಂ.ಎನ್, ಗಣ್ಯರಾದ ಟಾಕನಗೌಡ ಪಾಟೀಲ, ಉಮೇಶ ದೊಡ್ಡಮನಿ, ಪ್ರಭು ಬಿದರಕೊಪ್ಪ, ರಾಜೋಲಿ ಮುಕ್ತೆಸೂರ, ಶೇರಾಲಿ ಮುಲ್ಲಾ, ಸುರೇಶ ಪಾಳಾ, ಬಸಣ್ಣ ಹೊಸಮನಿ, ಹಜರತ್ ಗುಮ್ಜದ, ಭಾಷಾಸಾಬ ಕನವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.