ಹಿರೇಕೆರೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಇಲ್ಲಿನ ಸಿ.ಇ.ಎಸ್. ವಿದ್ಯಾಸಂಸ್ಥೆಯ ಕೆ.ಎಚ್. ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಅಭಿನಂದಿಸಲಾಯಿತು.
ವಿಜ್ಞಾನ ವಿಭಾಗದಲ್ಲಿ ಪ್ರಜ್ವಲ್ ಆರ್.ಬಿ. ಶೇ 95.67ರಷ್ಟು ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಚೈತ್ರಾ ಶೇ 93.50ರಷ್ಟು ಫಲಿತಾಂಶ ದಾಖಲಿಸಿ ತಾಲ್ಲೂಕಿಗೆ ದ್ವಿತೀಯ ಸ್ಥಾನ, ಜಯಶ್ರೀ ಜಿ. ಮರಿಗೌಡ ಶೇ 93.17ರಷ್ಟು ಅಂಕ ಗಳಿಸಿ ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ನಿರ್ದೇಶಕ ಎಕೇಶಣ್ಣ ಬಣಕಾರ, ಪ್ರಾಂಶುಪಾಲ ಕೆ.ಎಚ್. ಮಾವಿನತೋಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.