ADVERTISEMENT

ಹಾವೇರಿ | ಪ್ರತ್ಯೇಕ ಅಪಘಾತ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:32 IST
Last Updated 23 ಆಗಸ್ಟ್ 2025, 2:32 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಹಾವೇರಿ: ಜಿಲ್ಲೆಯ ಹಂಸಬಾವಿ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ADVERTISEMENT

‘ಹಿರೇಕೆರೂರು ತಾಲ್ಲೂಕಿನ ನಿಟ್ಟೂರಿನ ಶಾಂತವ್ವ ಆನಂದಪ್ಪ ಜಾವಳ್ಳಿ (50) ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಕುಂಚೂರಿನ ದ್ಯಾಮವ್ವ ಚಂದ್ರಗೌಡ ಪಾಟೀಲ (45) ಮೃತರು. ಎರಡೂ ಅಪಘಾತಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಾಂತವ್ವ ಅವರು ಆ. 21ರಂದು ಹರೀಶ ಕೋತನವರ ಅವರ ಬೈಕ್‌ನ ಹಿಂಬದಿ ಕುಳಿತು ಹೊರಟಿದ್ದರು. ಅತೀ ವೇಗದಲ್ಲಿದ್ದ ಬೈಕ್, ಹಂಸಬಾವಿ–ಕೋಡ ರಸ್ತೆಯಲ್ಲಿ ಹಂಪ್ಸ್‌ನಲ್ಲಿ ಉರುಳಿ ಬಿದ್ದಿತ್ತು. ಬೈಕ್‌ನಿಂದ ಬಿದ್ದಿದ್ದ ಶಾಂತವ್ವ ಅವರಿಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಹರೀಶ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಇನ್ನೊಂದು ಪ್ರಕರಣದಲ್ಲಿ ದ್ವಾಮವ್ವ ಅವರು ಆಗಸ್ಟ್ 21ರಂದು ಬಟ್ಟೆ ತೊಳೆಯಲು ಕುಂಚೂರು ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಆರೋಪಿ ಬ್ಯಾಡಗಿ ತಾಲ್ಲೂಕಿನ ಬೀಸಲಹಳ್ಳಿಯ ಚಂದ್ರಪ್ಪ ರಾಮಪ್ಪ ಕುಂಬಾರ ಅತೀ ವೇಗದಲ್ಲಿ ಒಮಿನಿ ಚಲಾಯಿಸಿದ್ದ. ಇದೇ ಒಮಿನಿ ದ್ಯಾಮವ್ವ ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ದ್ಯಾಮವ್ವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.