ಹಿರೇಕೆರೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ರಾಷ್ಟ್ರಧ್ವಜ ಹೊತ್ತು ಸಾಗಿದರು
ಹಿರೇಕೆರೂರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಂಭ್ರಮಿಸಿ ಪಟ್ಟಣದಲ್ಲಿ ಮಂಗಳವಾರ ತಿರಂಗಾ ಯಾತ್ರೆ ನಡೆಸಲಾಯಿತು.
ದೇಶಭಕ್ತ ನಾಗರಿಕರ ವೇದಿಕೆಯಡಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಹಾಗೂ ತಾಲ್ಲೂಕಿನಲ್ಲಿರುವ ನಿವೃತ್ತ ಸೈನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರರಾವ ವೃತ್ತದವರೆಗೆ ಯಾತ್ರೆ ನಡೆಯಿತು. 200 ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಹೆಜ್ಜೆ ಹಾಕಿದರು. ‘ಜಮ್ಮು ಮತ್ತು ಕಾಶ್ಮೀರ; ಭಾರತ ಮಾತೆಯ ಸಿಂಧೂರ’ ಎನ್ನುವ ಘೋಷಣೆ ಕೂಗಿದರು.
ಯಾತ್ರೆ ಆರಂಭಕ್ಕೂ ಮುನ್ನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ವಿ. ಸೊರಟೂರ, ಮುಖಂಡ ಬಿ.ಸಿ. ಪಾಟೀಲ, ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಮನಿ, ಎಸ್.ಎಸ್. ಪಾಟೀಲ, ಹರೀಶ ಕಲಾಲ, ಎಸ್. ವೀರಭದ್ರಯ್ಯ, ಶಿವಕುಮಾರ ತಿಪಶೆಟ್ಟಿ, ಲಿಂಗಾಚಾರ್ ಮಾಯಾಚಾರ್, ರುದ್ರೇಶ್ ಬೆಂತೂರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.