ADVERTISEMENT

ಧರ್ಮದ ತಳಹದಿ ಮೇಲೆ ಬದುಕು ಸಾಗಬೇಕು: ವಿಶ್ವಾರಾಧ್ಯ ಸ್ವಾಮೀಜಿ

ವೀರಭದ್ರಯ್ಯ ಸ್ವಾಮೀಜಿ 32 ಪುಣ್ಯಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:05 IST
Last Updated 1 ಜುಲೈ 2025, 14:05 IST
ಶಿಗ್ಗಾವಿ ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮದ ಮುರುಘೇಂದ್ರ ಮಠದಲ್ಲಿ ಸೋಮವಾರ ನಡೆದ ಲಿಂಗೈಕ್ಯ ವೀರಭದ್ರಯ್ಯ ಸ್ವಾಮೀಜಿ 32 ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮಸ್ಥರು ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪಾದ ಪೂಜೆ ಸಲ್ಲಿಸಿದರು.
ಶಿಗ್ಗಾವಿ ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮದ ಮುರುಘೇಂದ್ರ ಮಠದಲ್ಲಿ ಸೋಮವಾರ ನಡೆದ ಲಿಂಗೈಕ್ಯ ವೀರಭದ್ರಯ್ಯ ಸ್ವಾಮೀಜಿ 32 ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮಸ್ಥರು ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪಾದ ಪೂಜೆ ಸಲ್ಲಿಸಿದರು.   

ಶಿಗ್ಗಾವಿ: ಧರ್ಮದ ತಳಹದಿ ಮೇಲೆ ಬದುಕು ಸಾಗಿದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯವಿದೆ. ಅದಕ್ಕಾಗಿ ಮನುಷ್ಯ ಭಕ್ತಿ ಮಾರ್ಗ ಆಯ್ಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ಅದಕ್ಕೆ ವೀರಭದ್ರಯ್ಯ ಸ್ವಾಮೀಜಿ ಅವರ ಸಂದೇಶ ಮತ್ತು ಅವರ ಬದುಕು ಸಾಕ್ಷಿಯಾಗಿದೆ ಎಂದು ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿರುವ ಕಾಶಿ ಶಾಖಾಮಠವಾದ ಮುರುಘೇಂದ್ರ ಮಠದಲ್ಲಿ ಸೋಮವಾರ ನಡೆದ ಲಿಂಗೈಕ್ಯ ವೀರಭದ್ರಯ್ಯ ಸ್ವಾಮೀಜಿ 32 ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜನನ, ಮರಣ ತಪ್ಪಿದಲ್ಲ. ಹೀಗಾಗಿ ಬದುಕಿನ ಅವಧಿಯಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತಿನಲ್ಲಿ ದಾನಧರ್ಮ ಮಾಡುವ ಗುಣ ಬೆಳಸಿಕೊಳ್ಳಬೇಕು. ತಂದೆ, ತಾಯಿಗಳಿಗೆ ಗೌರವ ನೀಡಬೇಕು. ಅವರ ವೃದ್ಯಾಪದಲ್ಲಿ ಪಾಲನೆ ಪೋಷಣೆ ಮಾಡುವ ಮೂಲಕ ಅವರ ಋಣ ತೀರಿಸುವ ಕಾರ್ಯ ಶ್ರೇಷ್ಟವಾಗಿದೆ. ತಂದೆ–ತಾಯಿಗಿಂತ ಬಂಧುಗಳಿಲ್ಲ. ಆಧುನಿಕತೆ ಆಡಂಭರಕ್ಕೆ ಸಿಲುಕಿ ಬದುಕು ಹಾಳು ಮಾಡಿಕೊಳ್ಳಬೇಡಿರಿ. ದುಷ್ಚಟಗಳಿಂದ ದೂರಾಗುವ ಜತೆಗೆ ಆರೋಗ್ಯಯುತ ಸಮಾಜ ನಿಮರ್ಾಣಕ್ಕೆ ಶ್ರಮಿಸಿರಿ. ಮುಂದುನ ಯುವಪೀಳಿಗೆಗೆ ಉತ್ತಮ ಹೆಜ್ಜೆ ಗುರುತುಗಳನ್ನು ಬಿಡಬೇಕಾದ ಕರ್ತವ್ಯ ಪ್ರತಿಯೊಬ್ಬರದಾಗಿದೆ. ಇಂತಹ ಸತ್ಯಾಂಶಗಳನ್ನು ಅರಿತು ನಡೆಯಬೇಕು ಎಂದರು.

ADVERTISEMENT

ಮಠದಲ್ಲಿ ವೀರಭದ್ರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ ಅವರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಶಿವಸೋತ್ರ ಶತನಾಮಾವಳಿ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.

ಹಿರೇಬೆಂಡಿಗೇರಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ದಯ್ಯ ಶಾಸ್ತ್ರಿ ಹಿರೇಮಠ ಸಮ್ಮುಖ ವಹಿಸಿದ್ದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಕೆಎಂಎಫ್ ನಿದರ್ೇಶಕ ತಿಪ್ಪಣ್ಣ ಸಾತಣ್ಣವರ, ಕೇದಾರೆಪ್ಪ ಬಗಾಡೆ, ಶಿವಾನಂದ ಮ್ಯಾಗೇರಿ, ರಾಮಣ್ಣ ಕಮಡೊಳ್ಳಿ, ಗೋಣೆಪ್ಪ ಜಾರಗಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಸಿದ್ದಪ್ಪ ಹರಿಜನ, ಚನಬಸಯ್ಯ ಹಿರೇಮಠ, ವಿರೂಪಾಕ್ಷಪ್ಪ ಪಟ್ಟೇದ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.