ADVERTISEMENT

ತಡಸ ಗ್ರಾಮದಲ್ಲಿ ಉತ್ತಮ ಮಳೆ: ಬಿತ್ತನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:53 IST
Last Updated 20 ಮೇ 2025, 15:53 IST
<div class="paragraphs"><p>ತಡಸ ಗ್ರಾಮದಲ್ಲಿ ಮಂಗಳವಾರ ಮಳೆ ಸುರಿಯಿತು</p></div>

ತಡಸ ಗ್ರಾಮದಲ್ಲಿ ಮಂಗಳವಾರ ಮಳೆ ಸುರಿಯಿತು

   

ತಡಸ: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಮುತ್ತಳಿ, ಕಮಲಾನಗರ, ಅಡವಿಸೋಮಾಪುರ, ಹೊನ್ನಾಪುರ, ನೀರಲಗಿ, ದುಂಡಸಿಯಲ್ಲಿ ಎರಡು ದಿನಗಳಿಂದ ಉತ್ತಮ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಸೋಮವಾರ ರಾತ್ರಿ ಆರಂಭವಾದ ಮಳೆ, ಮಂಗಳವಾರವೂ ಸುರಿಯಿತು. ಇದರಿಂದ ರೈತರು, ಕೃಷಿ ಕಾಯಕಕ್ಕೆ ಸಜ್ಜಾಗಿದ್ದಾರೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.

ADVERTISEMENT

‘ಬಿತ್ತನೆಗೆ ಸೂಕ್ತವಾದ ಸಮಯದಲ್ಲೇ ಮಳೆಯಾಗುತ್ತಿದೆ. ಇದರಿಂದ ಉತ್ತಮ ರೀತಿಯಲ್ಲಿ ಬಿತ್ತನೆ ಮಾಡಲು ಅನುಕೂಲವಾಗುತ್ತದೆ’ ಎಂದು ರೈತ ಪರಶುರಾಮ್ ಹೇಳಿದರು.

‘ಇನ್ನೆರಡು ದಿನ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ರೈತರಿಗಾಗಿ ರಿಯಾಯಿತಿ ದರದ ಬಿತ್ತನೆ ಬೀಜಗಳು ಲಭ್ಯವಿದ್ದು, ಬಿತ್ತನೆಗೆ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಇದರಿಂದ ಬೀಜ ಹಾನಿಯಾಗದೆ ಉತ್ತಮ ಇಳುವರಿ ಸಿಗುತ್ತದೆ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಆರ್. ದಾವಣಗೆರೆ ಹೇಳಿದರು.

ತಡಸ ಸಮೀಪದ ದುಂಡಸಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬಿತ್ತನೆ ಬೀಜ ಖರೀದಿಗಾಗಿ ನಿಂತಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.