ADVERTISEMENT

ಅಂಗವಿಕಲರಿಗೆ ಉಚಿತ ಎಲ್ ಪಿ ಜಿ ಗ್ಯಾಸ್ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:51 IST
Last Updated 18 ಜೂನ್ 2025, 15:51 IST
ವಿಕಲಚೇತನರಿಗೆ ಎಲ್ ಪಿ ಜಿ ಗ್ಯಾಸ್ ವಿತರಣೆ ಮಾಡುತ್ತೀರುವ ಚಿತ್ರ.
ವಿಕಲಚೇತನರಿಗೆ ಎಲ್ ಪಿ ಜಿ ಗ್ಯಾಸ್ ವಿತರಣೆ ಮಾಡುತ್ತೀರುವ ಚಿತ್ರ.   

ಹಿರೇಕೆರೂರು: ಪಟ್ಟಣ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಎಸ್ ಎಫ್ ಸಿ ಮುಕ್ತ ನಿಧಿ ಮತ್ತು ಪಟ್ಟಣ ಪಂಚಾಯಿತಿ ನಿಧಿಯ ಅನುದಾನದಲ್ಲಿ ಶೇ 5ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿ ಮಂಗಳವಾರ 16 ಫಲಾನುಭವಿಗಳಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸ್ಟೋವ್‌ ಮತ್ತು ಸಿಲಿಂಡರ್‌ಗಳನ್ನು ಶಾಸಕ ಯು.ಬಿ. ಬಣಕಾರ ವಿತರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ, ಸ್ಥಾಯಿ ಸಮಿತಿ ಚೇರ್ಮನ್ ಮಹೇಂದ್ರ ಬಡಳ್ಳಿ, ಉಪಾಧ್ಯಕ್ಷ ರಾಜು ಕರಡಿ, ಸದಸ್ಯರಾದ ಅಲ್ತಾಫ್ ಖಾನ್ ಪಠಣ, ರಮೇಶ ತೋರಣಗಟ್ಟೆ, ಹನುಮಂತಪ್ಪ, ರಜಿಯಾ ಅಸಾದಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT