ತಿಳವಳ್ಳಿ: ಸಮೀಪದ ಕೂಸನೂರು ಗ್ರಾಮದ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ ಎಂಟನೇ ಬಾರಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.
53 ವಿದ್ಯಾರ್ಥಿಗಳಲ್ಲಿ 10 ಮಂದಿ ಅತ್ಯುನ್ನತ ಶ್ರೇಣಿ, 37– ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೀರ್ತಿ ವಿರೇಶ ಹಮ್ಮಿಗಿ (ಶೇ 97.28), ರೋಜಾ ಪುಟ್ಟಪ್ಪ ಹೊಳೆಪ್ಪನವರ (ಶೇ 96), ಭೂಮಿಕಾ ಅಗಸಿಬಾಗಿಲ (ಶೇ 93.76) ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಬಸವರಾಜ ಕುರಿಯವರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.