ADVERTISEMENT

ಬ್ಯಾಡಗಿ | ಲೋಕ ಅದಾಲತ್‌ : 5,073 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:35 IST
Last Updated 18 ಜುಲೈ 2024, 14:35 IST
ಬ್ಯಾಡಗಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ನ್ಯಾಯಾಧೀಶ ಅಮೊಲ್ ಹಿರಿಕುಡೆ ಮತ್ತು ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು
ಬ್ಯಾಡಗಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ನ್ಯಾಯಾಧೀಶ ಅಮೊಲ್ ಹಿರಿಕುಡೆ ಮತ್ತು ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು    

ಬ್ಯಾಡಗಿ: ಪಟ್ಟಣದ ನ್ಯಾಯಾಲಯದಲ್ಲಿ ಒಟ್ಟು ₹5.19 ಕೋಟಿ ಮೊತ್ತದ 5,073 ಪ್ರಕರಣಗಳನ್ನು ಜುಲೈ13ರಂದು ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಯಿತು.

ಹಿರಿಯ ನ್ಯಾಯಾಧೀಶ ಅಮೊಲ್ ಹಿರಿಕುಡೆ ಮತ್ತು ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ ನೇತೃತ್ವದಲ್ಲಿ ಲೋಕ್‌ ಅದಾಲತ್‌ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಿವಿಲ್ ಮತ್ತು ಕ್ರಿಮಿನಲ್ ವಿಭಾಗಗಳ ಬಾಕಿಯಿದ್ದ ಬ್ಯಾಂಕ್‌ ವಸೂಲಾತಿ, ಚೆಕ್ ಬೌನ್ಸ್‌, ಮೋಟಾರು ವಾಹನ ಅಪಘಾತ, ಸಿವಿಲ್ ವ್ಯಾಜ್ಯಗಳು, ಅಮಲ್ದಾರಿ, ಜೀವನಾಂಶ, ಗೃಹಕೃತ್ಯ ದೌರ್ಜನ್ಯ, ಲಘು ಅಪರಾಧ, ವ್ಯಾಜ್ಯ ಪೂರ್ವ ಸಾಲ ವಸೂಲಾತಿ, ನೀರಿನ ಬಿಲ್ ಮತ್ತು ಟೆಲಿಫೋನ್ ಬಿಲ್ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ವ್ಯಾಜ್ಯಪೂರ್ವ ಮತ್ತು ರಾಜೀಯಾಗಬಲ್ಲ ಅಪರಾಧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT