ADVERTISEMENT

ಅಂಬೇಡ್ಕರ್ ತತ್ವಾದರ್ಶ ಪಾಲಿಸಿ: ಗುರುಶಾಂತೇಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 2:23 IST
Last Updated 22 ಸೆಪ್ಟೆಂಬರ್ 2020, 2:23 IST
ಮಹಾನಾಯಕ ಧಾರವಾಹಿ ಜಾಹೀರಾತು ಪೋಸ್ಟರ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಮಹಾನಾಯಕ ಧಾರವಾಹಿ ಜಾಹೀರಾತು ಪೋಸ್ಟರ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಗುತ್ತಲ: ಈ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಅದೇ ಅವರಿಗೆ ನೀಡುವ ಅತ್ಯುತ್ತಮ ಉಡುಗೊರೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನೆಗಳೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಾಯಕ ಧಾರವಾಹಿ ಪೋಸ್ಟರ್‌ ಅನಾವರಣಗೊಳಿಸಿ ಮಾತನಾಡಿದರು. ಅಂಬೇಡ್ಕರ್ ರವರ ಕುರಿತಾದ ಜೀವನ ಚರಿತ್ರೆ ಧಾರವಾಹಿ ರೂಪದಲ್ಲಿ ಜೀ ಕನ್ನಡ ವಾಹಿನಿ ಪ್ರಸಾರ ಮಾಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಆ ಧಾರವಾಹಿಯನ್ನು ತೋರಿಸಿ ಅವರ ತತ್ವಾದರ್ಶಗಳನ್ನು ಜೀವನ ಮೌಲ್ಯಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಜೀವನದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ಡಿ.ಎಚ್. ತಿಮ್ಮಣ್ಣನವರ, ಜಗದೀಶ ಹುಸಿಮರದ, ಮಾಲತೇಶ ಮುಂದಿಯಣ್ಣನವರ, ಸಿ.ಡಿ. ಸಂಜೀವಣ್ಣನವರ, ನೀಲ್ಲಪ್ಪ ಶಿಡಲಣ್ಣನವರ, ದ್ಯಾಮಪ್ಪ ತಿಮ್ಮಣ್ಣನವರ, ಕರಿಯಪ್ಪ ನಾಗಣ್ಣನವರ, ಹನುಮಂತಪ್ಪ ಜಾಲಣ್ಣನವರ, ಯಲ್ಲಪ್ಪ ನಾಗಣ್ಣನವರ, ಅಶೋಕ ಜಾಲಣ್ಣನವರ, ದ್ಯಾಮಪ್ಪ ಶಿದ್ದಣ್ಣನವರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.