ADVERTISEMENT

ಸೊಪ್ಪು–ತರಕಾರಿ ಮತ್ತೆ ಹೆಚ್ಚಳ

ಹರ್ಷವರ್ಧನ ಪಿ.ಆರ್.
Published 3 ಜನವರಿ 2019, 12:33 IST
Last Updated 3 ಜನವರಿ 2019, 12:33 IST
ಹಾವೇರಿಯ ಲಾಲ್‌ಬಹುದ್ದೂರ್‌ ಶಾಸ್ತ್ರಿ ಮಾರುಕಟ್ಟಯಲ್ಲಿ ಗುರುವಾರದ ಸಂತೆ
ಹಾವೇರಿಯ ಲಾಲ್‌ಬಹುದ್ದೂರ್‌ ಶಾಸ್ತ್ರಿ ಮಾರುಕಟ್ಟಯಲ್ಲಿ ಗುರುವಾರದ ಸಂತೆ   

ಹಾವೇರಿ:ನಗರದ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ಬೆಲೆಯು ಮತ್ತೆ ಏರಿಕೆ ಕಂಡಿದೆ. ಆದರೆ, ಕಳೆದ ಬಾರಿ ಇಳಿಕೆ ಕಂಡಿದ್ದ ಮೀನಿನ ದರವು ಮತ್ತೆ ಏರಿಕೆಯಾಗಿದೆ.

ಜಿಲ್ಲೆಯ ವಿವಿಧೆಡೆ ಶುಭಕಾರ್ಯಗಳು ಶುರುವಾಗಿದ್ದು, ತರಕಾರಿ–ಸೊಪ್ಪು ತರಕಾರಿಗೆ ಬೇಡಿಕೆ ಹೆಚ್ಚಿವೆ. ಅಲ್ಲದೇ, ಜಾತ್ರೆಗಳೂ ಅಲ್ಲಲ್ಲಿ ನಡೆಯುತ್ತಿವೆ. ಹೀಗಾಗಿ, ಕಳೆದ ವಾರ ಸ್ವಲ್ಪ ಏರಿಕೆ ಕಂಡ ತರಕಾರಿ ದರವು ಈ ವಾರವೂ ಏರಿಕೆಯಾಗಿದೆಎಂದು ವ್ಯಾಪಾರಿ ಸುರೇಶ ಯಲ್ಲಾಪುರ ತಿಳಿಸಿದರು.

ನಗರ ಲಾಲ್‌ಬಹುದ್ದೂರ್‌ ಶಾಸ್ತ್ರಿ ಮಾರುಕಟ್ಟೆಯ ಗುರುವಾರದ ಸಂತೆಯಲ್ಲಿ ಕೆ.ಜಿ. ಈರುಳ್ಳಿ ₹20, ಆಲೂಗಡ್ಡೆ ₹20, ಮೆಣಸಿನಕಾಯಿ ₹60 ರಿಂದ 70, ಮುಳಗಾಯಿ (ಬದನೆ) ₹40, ಚೌಳಿಕಾಯಿ ₹40, ಬೀಟ್ ರೂಟ್ ₹30, ಕ್ಯಾರೆಟ್ ₹35, ಸೌತೆಕಾಯಿ ₹50, ಬೀನ್ಸ್ ₹40, ಟೊಮೆಟೊ ₹20, ಅವರೆಕಾಯಿ ₹40, ಹಾಗಲಕಾಯಿ ₹40, ಹೀರೆಕಾಯಿ ₹60 ಇತ್ತು. ಹೂಕೋಸು ಒಂದಕ್ಕೆ ₹25ರಿಂದ 20 ಇತ್ತು.

ADVERTISEMENT

ಹಣ್ಣುಗಳ ದರವು ಬಹುತೇಕ ಸ್ಥಿರವಾಗಿದೆ. ಕೆ.ಜಿ. ದ್ರಾಕ್ಷಿ ₹80ರಿಂದ ₹100, ಸೇಬು ₹100 ರಿಂದ ₹ 120, ಚಿಕ್ಕು ₹70, ದಾಳಿಂಬೆ ₹100 ಇದೆ. ಡಜನ್‌ ಪಚ್ಚೆ ಬಾಳೆಹಣ್ಣಿಗೆ ₹40, ಜೀರಿಗೆ (ಮಿಟ್ಲಿ) ಬಾಳೆಹಣ್ಣಿಗೆ ₹35 ಇವೆ ಎಂದು ವ್ಯಾಪಾರಿ ರಸೂಲ್‌ ತಿಳಿಸಿದರು.

ಮೀನು ಮಾರುಕಟ್ಟೆಯಲ್ಲಿ ಕೆ.ಜಿ. ಬಂಗುಡೆ– ₹130, ರೂಪ್ ಚಂದ್– ₹150, ಬಾಳಾ– ₹120, ಗೌರಿ– ₹140, ಚೌಡಿ– ₹100, ಟ್ರಾಲಿ– ₹80, ಜೀಲೆಬಿ– ₹120, ಬುಳ್ಳೆಂಜೀರ್ –₹250, ಸೌದಾಳ್ –₹ 250 ಎಂದು ಮೀನಿನ ವ್ಯಾಪಾರಿ ಇಕ್ಬಾಲ್ ಗಣಜೂರ ತಿಳಿಸಿದರು.

ವರ್ಷಾಂತ್ಯ ಆಚರಣೆಯ ಡಿ.31ರಂದು ಮೀನು, ಕೋಳಿ ಮಾಂಸ ಹಾಗೂ ಕುರಿ ಮಾಂಸ ಮಾರಾಟ ಹೆಚ್ಚಿತ್ತು. ಆದರೆ, ದರದಲ್ಲಿ ಬದಲಾವಣೆ ಆಗಿಲ್ಲ ಎಂದು ಗೋವಿಂದಪ್ಪ ಕರ್ಜೂರ್‌ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.