ADVERTISEMENT

ಸವಾಲು ಎದುರಿಸಲು ಆತ್ಮಬಲ ಅಗತ್ಯ: ಸಿಇಒ ರೋಶನ್‌ ಹೇಳಿಕೆ

ಸ್ವಧಾರಾ ಕೇಂದ್ರದಲ್ಲಿ ನಾಮಕರಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 12:43 IST
Last Updated 27 ಫೆಬ್ರುವರಿ 2021, 12:43 IST
ಹಾವೇರಿ ನಗರದ ಧ್ವನಿ ಸ್ವಧಾರ ಕೇಂದ್ರದಲ್ಲಿ ಸಂತ್ರಸ್ತೆಯೊಬ್ಬರ ಮಗುವಿಗೆ ನಾಮಕರಣ ಮಾಡಲಾಯಿತು. ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌, ರೈಲ್ವೆ ಅಧಿಕಾರಿ ಅಂಕಿತಾ ವರ್ಮಾ, ಮಲ್ಲಿಕಾರ್ಜುನ ಮಠದ, ಪರಿಮಳಾ ಜೈನ್ ಇದ್ದಾರೆ 
ಹಾವೇರಿ ನಗರದ ಧ್ವನಿ ಸ್ವಧಾರ ಕೇಂದ್ರದಲ್ಲಿ ಸಂತ್ರಸ್ತೆಯೊಬ್ಬರ ಮಗುವಿಗೆ ನಾಮಕರಣ ಮಾಡಲಾಯಿತು. ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌, ರೈಲ್ವೆ ಅಧಿಕಾರಿ ಅಂಕಿತಾ ವರ್ಮಾ, ಮಲ್ಲಿಕಾರ್ಜುನ ಮಠದ, ಪರಿಮಳಾ ಜೈನ್ ಇದ್ದಾರೆ    

ಹಾವೇರಿ: ‘ಓದಿನೊಂದಿಗೆ ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟಗಳನ್ನಾದರೂ ಎದುರಿಸಿ ಗೆಲ್ಲಬಹುದು. ಆತ್ಮಬಲ ಎಂಬುದು ಮಹಿಳೆಗೆ ಎಲ್ಲಕ್ಕಿಂತ ದೊಡ್ಡದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ನುಡಿದರು.

ಇಲ್ಲಿಯ ಶಿವಾಜಿ ನಗರದಲ್ಲಿರುವ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿಯ ಸಂತ್ರಸ್ತೆಯೊಬ್ಬರ ಮಗುವಿಗೆ ‘ಆದ್ಯಾ’ ಎಂದು ನಾಮಕರಣ ಮಾಡಿ ಅವರು ಮಾತನಾಡಿದರು. ‘ಆದ್ಯಾ’ ಎಂದರೆ ದುರ್ಗಿ, ದುರ್ಗಾದೇವಿ ಎಂದರ್ಥ. ಈ ಮಗು ಎಲ್ಲವನ್ನು ಎದುರಿಸಿ ಗೆಲ್ಲಲಿ ಎಂದು ಹಾರೈಸಿದರು.

ಸಿಇಒ ರೋಶನ್‌ ಅವರ ಪತ್ನಿ, ರೈಲ್ವೆ ಅಧಿಕಾರಿ ಅಂಕಿತಾ ವರ್ಮಾಮಾತನಾಡಿ, ‘ಅನಾಥರ, ಅಸಹಾಯಕರ ಜೊತೆಗೆ ನಾವೆಲ್ಲ ಇರಬೇಕು. ಕರ್ತವ್ಯದ ಸಂಗಡ ಸಮಾಜ ಪ್ರೀತಿ ಇದ್ದರೆ, ನಮ್ಮ ವೃತ್ತಿಗೆ ಇನ್ನೂ ಹೆಚ್ಚು ಘನತೆ ಬರುತ್ತದೆ’ ಎಂದರು.

ADVERTISEMENT

ಸ್ವಧಾರಾದ ಮುಖ್ಯಸ್ಥೆ ಪರಿಮಳಾ ಜೈನ್ ಮಾತನಾಡಿ, ‘ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂಬ ಒಂದೇ ಒಂದು ಸಂದೇಶ ಪ್ರತಿ ಮಹಿಳೆಗೆ ಇಂದು ಬೇಕಾಗಿದೆ. ಈ ದಿಕ್ಕಿನಲ್ಲಿ ನಮ್ಮ ಸಂಸ್ಥೆ ಸಂಕಷ್ಟಕ್ಕೀಡಾದ ಯಾವುದೇ ಮಹಿಳೆಗೆ ದಿನದ 24 ತಾಸು ಸಹಾಯ ಹಸ್ತ ಚಾಚುತ್ತದೆ ಎಂದರು.

ಸಮಾರಂಭದಲ್ಲಿ ಹಿರಿಯ ನಾಗರಿಕ ಸೇವಾ ಇಲಾಖೆಯ ಮಲ್ಲಿಕಾರ್ಜುನ ಮಠದ, ಶರಣ ಸಾಹಿತ್ಯ ಪರಿಷತ್ತಿನ ಎಸ್.ಆರ್. ಹಿರೇಮಠ ಭಾಗವಹಿಸಿದ್ದರು. ಶಾಂತಾ ತಿರುಮಲೆ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಎ.ಎನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.