ADVERTISEMENT

ಪೋಷಣ ಅಭಿಯಾನ: ಹಾವೇರಿ ಜಿಲ್ಲೆಗೆ 1767 ಸಿಮ್‌ ಪೂರೈಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:52 IST
Last Updated 24 ಸೆಪ್ಟೆಂಬರ್ 2020, 14:52 IST
ಕೇಂದ್ರ ಸರ್ಕಾರದ ‘ಪೋಷಣ ಅಭಿಯಾನ’ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲು ಜಿಲ್ಲೆಗೆ ಪೂರೈಕೆಯಾಗಿರುವ ಸಿಮ್‌ಗಳು
ಕೇಂದ್ರ ಸರ್ಕಾರದ ‘ಪೋಷಣ ಅಭಿಯಾನ’ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲು ಜಿಲ್ಲೆಗೆ ಪೂರೈಕೆಯಾಗಿರುವ ಸಿಮ್‌ಗಳು   

ಹಾವೇರಿ: ಕೇಂದ್ರ ಸರ್ಕಾರದ ‘ಪೋಷಣ ಅಭಿಯಾನ’ ಯೋಜನೆಯಡಿಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ನೀಡಲು 1994 ಸ್ಮಾರ್ಟ್ ಫೋನ್‌ಗಳು ಹಾಗೂ 1767 ಸಿಮ್‌ಗಳು ಜಿಲ್ಲೆಗೆ ಪೂರೈಕೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟಪ್ಪನವರ ತಿಳಿಸಿದರು.

ಸ್ಮಾರ್ಟ್‌ಫೋನ್‌ ಜತೆ ಪವರ್ ಬ್ಯಾಂಕ್‌, ಮೆಮೊರಿ ಕಾರ್ಡ್‌, ಬ್ಯಾಕ್‌ ಕೇಸ್‌, ಡಸ್ಟ್‌ ಪ್ರೂಫ್‌ ಕೇಸ್‌, ಸ್ಕ್ರೀನ್‌ ಪ್ರೊಟೆಕ್ಟರ್‌ ಮತ್ತು ಹೆಡ್‌ಸೆಟ್‌ ಪರಿಕರಗಳನ್ನು ವಿತರಿಸಲಾಗಿದೆ. ಸಿಮ್ ಕಾರ್ಡ್‍ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸುತ್ತಿದ್ದೇವೆ. ಈಗಾಗಲೇ ಶೇ 80ರಷ್ಟು ಸಿಮ್‌ಗಳು ಬಂದಿದ್ದು, ಬಾಕಿ ಸಿಮ್‌ಗಳು ವಾರದೊಳಗೆ ಬರುವ ಸಾಧ್ಯತೆ ಇದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT