ADVERTISEMENT

ಮಹಿಳಾ ಸಮುದಾಯ ವಿಕಸಾಕ್ಕೆ ಸಂಘಟನೆ ಅವಶ್ಯ: ಅನ್ನಪೂರ್ಣ ಶೆಟ್ಟರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:28 IST
Last Updated 17 ಜೂನ್ 2025, 15:28 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಫಕ್ಕಿರೇಶ್ವರ ಮಠದ ಸಭಾಭಾವನದಲ್ಲಿ ಭಾನುವಾರ ನಡೆದ ಕ್ವೀನ್‌ ಬೀ ಕ್ಲಬ್‌ನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಕ್ವೀನ್‌ ಬೀ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣ ಶೆಟ್ಟರ ಉದ್ಘಾಟಿಸಿದರು.
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಫಕ್ಕಿರೇಶ್ವರ ಮಠದ ಸಭಾಭಾವನದಲ್ಲಿ ಭಾನುವಾರ ನಡೆದ ಕ್ವೀನ್‌ ಬೀ ಕ್ಲಬ್‌ನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಕ್ವೀನ್‌ ಬೀ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣ ಶೆಟ್ಟರ ಉದ್ಘಾಟಿಸಿದರು.   

ಶಿಗ್ಗಾವಿ: ಮಹಿಳಾ ಸಮುದಾಯದ ವಿಕಸನಕ್ಕೆ ಸಂಘಟನೆಗಳು ಪ್ರಬಲವಾಗಿ ಬೆಳೆಯುವುದು ಅವಶ್ಯವಾಗಿದೆ. ಮನೆ, ಕೆಲಸ, ಮಕ್ಕಳು ಅಷ್ಟೇ ಜೀವನ ಸೀಮಿತವಾಗದೆ. ತಮ್ಮಲ್ಲಿರುವ ಕಲೆಗಳಿಗೆ ಮೆರಗು ನೀಡುವ ಕಾರ್ಯಗಳಿಗೆ ಸಂಘ ಸದಾ ಬೆಂಬಲಿಸುತ್ತಿದೆ ಎಂದು ಕ್ವೀನ್‌ ಬೀ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣ ಶೆಟ್ಟರ ಹೇಳಿದರು.

ತಾಲ್ಲೂಕಿನ ಬಂಕಾಪುರದ ಫಕ್ಕಿರೇಶ್ವರ ಮಠದ ಸಭಾ ಭವನದಲ್ಲಿ ಭಾನುವಾರ ನಡೆದ ಕ್ವೀನ್‌ ಬೀ ಕ್ಲಬ್‌ನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ವೀನ್‌ ಬೀ ಕ್ಲಬ್‌ನಲ್ಲಿರುವ ಮಹಿಳೆಯರು ವಿಭಿನ್ನ ಕ್ಷೇತ್ರದ ಹಿನ್ನಲೆಯುಳ್ಳವರಾಗಿದ್ದು, ತಮ್ಮ ವೈಯಕ್ತಿಕ ಸಂತೋಷ ನಮ್ಮ ಕ್ಲಬ್‌ನ ಚಟುವಟಿಕೆಯಿಂದ ಪಡೆಯುತ್ತಿದ್ದಾರೆ. ಹೀಗೆ ಮಹಿಳೆಯರ ಏಳ್ಗೆಗಾಗಿ ಇನ್ನು ಅನೇಕ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದರು.

ADVERTISEMENT

ಬಂಕಾಪುರ ಪಟ್ಟಣದ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ಮಾತನಾಡಿ, ಮನುಷ್ಯ ಸಂಘ ಜೀವಿಯಾಗಿದ್ದು, ಅನೇಕ ಮಹಿಳಾ ಸಂಘಗಳನ್ನು ಎಲ್ಲ ಕಡೇ ಕಾಣಬಹುದು. ಆದರೆ ಅವೆಲ್ಲ ಆರ್ಥಿಕ ಬೆಳವಣಿಗೆಗೆ ಮಾತ್ರವಾಗಿವೆ. ಮಹಿಳೆಯರ ವ್ಯಕ್ತಿತ್ವ ವಿಕಸನಕ್ಕೆ ಕ್ವೀನ್‌ ಬೀ ಕ್ಲಬ್‌ನಂತೆ ಸಂಘಗಳು ಸಮಾಜಕ್ಕೆ ಬೇಕಾಗಿದೆ ಎಂದರು.

ಶೋಭಾ ಮಾಮ್ಲೆಪಟ್ಟಣಶೆಟ್ಟರ, ನಿರ್ಮಲಾ ಕೂಲಿ, ನೇತ್ರಾ ಕಡಕೋಳ, ಮೆಗಾ ಶೆಟ್ಟರ, ಜಯಶೀಲಾ ಮಾಮ್ಲೆಪಟ್ಟಣಶೆಟ್ಟರ, ನಿರ್ಮಲಾ ಮಾಮ್ಲೆಪಟ್ಟಣಶೆಟ್ಟರ, ಲತಾ ಕೊಲ್ಲಾವರ, ದೀಪಾ ಮಾಮ್ಲೆಪಟ್ಟಣಶೆಟ್ಟರ ಸೇರಿದಂತೆ ಸಂಘದ ಎಲ್ಲ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.