ADVERTISEMENT

ಹಾವೇರಿ: ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಪಿಡಿಒ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 11:16 IST
Last Updated 13 ಜೂನ್ 2025, 11:16 IST
<div class="paragraphs"><p>ರವಿಕುಮಾರ ಎಚ್.</p></div>

ರವಿಕುಮಾರ ಎಚ್.

   

ಹಾವೇರಿ: ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಜಿಲ್ಲೆಯ ಮೆಡ್ಲೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ ಎಚ್. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ರಾಹುತನಕಟ್ಟಿಯ ಕಾಯಂ ಪಿಡಿಒ ಆಗಿದ್ದ ರವಿಕುಮಾರ ಅವರಿಗೆ, ಮೆಡ್ಲೇರಿ ಗ್ರಾಮ ಪಂಚಾಯಿತಿಯ ಪ್ರಭಾರ ಹೊಣೆ ವಹಿಸಲಾಗಿತ್ತು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರುಚಿ ಬಿಂದಲ್ ಅವರು ಇತ್ತೀಚೆಗೆ ಮೆಡ್ಲೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು. ಆದರೆ, ಅಲ್ಲಿ ಪಿಡಿಒ ಹಾಜರಿರಲಿಲ್ಲ. ರಾಹುತನಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿದಾಗ, ಅಲ್ಲಿಯೂ ಪಿಡಿಒ ಇರಲಿಲ್ಲ.

ಕೇಂದ್ರ ಸ್ಥಾನದಲ್ಲಿರದೇ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಪಿಡಿಒ ರವಿಕುಮಾರ ಅವರನ್ನು ಅಮಾನತುಗೊಳಿಸಿ ಸಿಇಒ ರುಚಿ ಅವರು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.