ರಟ್ಟೀಹಳ್ಳಿ: ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ ಬಿಜೆಪಿ 3, ಕಾಂಗ್ರೆಸ್ 11, ಆಮ್ ಆದ್ಮಿ ಪಕ್ಷ (ಎಎಪಿ) 7, ಜೆಡಿಎಸ್ 1, ಪಕ್ಷೇತರ-13 ಸೇರಿದಂತೆ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾದವು. ಇದುವರೆಗೆ ಒಟ್ಟು 76 ನಾಮಪತ್ರಗಳು ಸಲ್ಲಿಕೆಯಾದವು. ಬುಧವಾರ ನಾಮಪತ್ರ ಪರಿಶೀಲನೆ ಕಾರ್ಯನಡೆಯಲಿದೆ. ಈಗಾಗಲೇ ಪಟ್ಟಣದ 15 ವಾರ್ಡ ಗಳಲ್ಲಿಯೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಎಎಪಿ ಪಕ್ಷಗಳ ಮುಖಂಡರು ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮೂಲಕ ಅಭ್ಯರ್ಥಿಗಳೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಶಾಸಕ ಯು.ಬಿ ಬಣಕಾರ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮುಖಂಡರಾದ ಸಂಜೀವಕುಮಾರ ನೀರಲಗಿ, ಪಿ.ಡಿ.ಬಸನಗೌಡ್ರ, ವಸಂತ ದ್ಯಾವಕ್ಕಳವರ, ಮಂಜುನಾಥ ತಂಬಾಕದ, ದುರ್ಗಪ್ಪ ನೀರಲಗಿ, ಪರಮೇಶಪ್ಪ ಕಟ್ಟೇಕಾರ, ರವೀಂದ್ರ ಮುದಿಯಪ್ಪನವರ, ನಿಂಗಪ್ಪ ಚಳಗೇರಿ, ರಮೇಶ ಮಡಿವಾಳರ, ಸರ್ಪರಾಜ ಮಾಸೂರು, ಎಂ.ಪಿ. ಪ್ರಕಾಶ, ಬಾಬುಸಾಬ ಜಡದಿ, ಮಹೇಶ ಗುಬ್ಬಿ, ಸಾಥ್ ನೀಡಿದರು.
ಆಮ್ಆದ್ಮಿ ಪಕ್ಷದ ಮುಖಂಡರಾದ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಪರೀದ್ ನದಾಫ್,ಎಂ.ಎನ್. ನಾಯಕ್, ಕಲೀಲಸಾಬ ದೊಡ್ಮನಿ, ರಾಜಶೇಖರ ದೊದಿಹಳ್ಳಿ, ಗೌಸಸಾಬ ಮೇಡ್ಲೇರಿ, ಮಂಜುನಾತ ಸಂಬೋಜಿ, ರಾಜೇಶ ಅಂಗಡಿ, ಬಸವರಾಜ ಬಣಕಾರ ಲಲಿತಾ ಲಮಾಣಿ, ಶೈಲಮ್ಮ ಹರನಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.