ADVERTISEMENT

ಪ್ರಿಯದರ್ಶಿನಿ ಮಹಾವಿದ್ಯಾಲಯ: ವಿಶ್ವ ರೆಡ್ ಕ್ರಾಸ್ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:06 IST
Last Updated 9 ಮೇ 2025, 15:06 IST
ರಟ್ಟೀಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಪ್ರಾಚಾರ್ಯ ಎ.ಜಿ. ರಾಘವೇಂದ್ರ ಮಾತನಾಡಿದರು.
ರಟ್ಟೀಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಪ್ರಾಚಾರ್ಯ ಎ.ಜಿ. ರಾಘವೇಂದ್ರ ಮಾತನಾಡಿದರು.   

ರಟ್ಟೀಹಳ್ಳಿ: ಮಾನವೀಯತೆಯನ್ನು ಜೀವಂತವಾಗಿರಿಸುವುದು ಎಂಬ ಕಲ್ಪನೆಯೊಂದಿಗೆ ಸರ್ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನಾಚರಣೆಯನ್ನು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯ ರಾಘವೇಂದ್ರ ಎ.ಜಿ. ಹೇಳಿದರು.

ಅವರು ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಪತ್ತು ಪೀಡಿತ ಪ್ರದೇಶಗಳ ಸಂಘರ್ಷದ ವೇಳೆ ಆರೋಗ್ಯ, ಬಿಕ್ಕಟ್ಟು ಮತ್ತು ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಸ್ವಯಂ ಸೇವಕರಾಗಿ ಮುನ್ನಗ್ಗಬೇಕು ಎನ್ನುವುದು ಇದರ ಕಲ್ಪನೆ, ಪ್ರಸ್ತಾವಿಕವಾಗಿ ರೆಡ್ ಕ್ರಾಸ್ ಸಂಯೋಜಕ ಸಿ.ಎನ್. ಸೊರಟೂರ ಮಾತನಾಡಿದರು.

ADVERTISEMENT

ಈ ಸಂದರ್ಭದಲ್ಲಿ ಎಚ್.ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮನೇಹಳ್ಳಿ, ಸಿ.ಎಸ್. ಕಮ್ಮಾರ, ವ್ಹಿ.ಎಸ್.ರೂಳಿ, ಶೇಷಗಿರಿ ತಾಂದಳೆ, ಎಂ.ಆರ್.ಅಂಚಿ, ವೈ.ವೈ. ಮರಳೀಹಳ್ಳಿ, ಸಿ.ಆರ್. ಹಿತ್ತಲಮನಿ, ಉಪಸ್ಥಿತರಿದ್ದರು

ಎಂ.ಎಂ. ಪ್ಯಾಟಿ, ಸುರೇಶ ಓಲೇಕಾರ, ಯಲ್ಲಪ್ಪ ಸುರಗೀಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.