ADVERTISEMENT

70 ಟನ್‌ ಅಕ್ರಮ ಮರಳು ವಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:20 IST
Last Updated 4 ಡಿಸೆಂಬರ್ 2021, 2:20 IST
ರಾಣೆಬೆನ್ನೂರು ತಾಲ್ಲೂಕಿನ ಚಿಕ್ಕಕುರುವತ್ತಿಯಲ್ಲಿ ಜಪ್ತಿ ಮಾಡಿರುವ ಅಕ್ರಮ ಮರಳು. ಕಂದಾಯ, ಗಣಿ ಮತ್ತು ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೇ ಸಿಬ್ಬಂದಿ ಇದ್ದಾರೆ
ರಾಣೆಬೆನ್ನೂರು ತಾಲ್ಲೂಕಿನ ಚಿಕ್ಕಕುರುವತ್ತಿಯಲ್ಲಿ ಜಪ್ತಿ ಮಾಡಿರುವ ಅಕ್ರಮ ಮರಳು. ಕಂದಾಯ, ಗಣಿ ಮತ್ತು ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೇ ಸಿಬ್ಬಂದಿ ಇದ್ದಾರೆ   

ರಾಣೆಬೆನ್ನೂರು: ತಾಲ್ಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 70 ಮರಳನ್ನು ಕಂದಾಯ, ಗಣಿ ಇಲಾಖೆ ಮತ್ತು ಗ್ರಾಮೀಣ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದರು. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗಿತ್ತು. ಇದರ ಮೌಲ್ಯ ₹ 45 ಸಾವಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್ ಶಂಕರ್‌ ಜಿ.ಎಸ್‌, ವಾಗೀಶ ಮಳೇಮಠ ಹಾಗೂ ಗಣಿ ಇಲಾಖೆಯ ನಾಗರಾಜ, ಗ್ರಾಮ ಲೆಕ್ಕಾಧಿಕಾರಿ ಕುಮಾರಿ ಚೇತನಾ ಮತ್ತು ಸಿ.ಎನ್‌. ಪೂಜಾರ, ಎಎಸ್‌ಐಗಳಾದ ಅಂಬಿಗೇರ ಹಾಗೂ ಹೆಳವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT