ಸವಣೂರು: ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಜರುಗಿದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸವಣೂರಿನಿಂದ ಭಕ್ತರು ಗುಗ್ಗಳ ಸಮೇತ ಶನಿವಾರ ಪಾದಯಾತ್ರೆ ಕೈಗೊಂಡರು.
ಪಟ್ಟಣದ ಕೋರಿಪೇಟೆಯಲ್ಲಿರುವ ಮತ್ತಿಗಟ್ಟಿ ಕುಟುಂಬಸ್ಥರ ಮನೆಯಿಂದ ವೀರಭದ್ರೇಶ್ವರ ದೇವರ ಗುಗ್ಗಳ ಸಮೇತ ಆರಂಭಗೊಂಡ ಪಾದಯಾತ್ರೆಗೆ ಗಂಗಾಧರಯ್ಯ ಸಾಲಿಮಠ ಚಾಲನೆ ನೀಡಿದರು.
ಪುರವಂತ ವೀರಪ್ಪ ಮತ್ತಿಗಟ್ಟಿ, ನಾಗಪ್ಪ ಕುಂಬಾರ, ಚನ್ನಯ್ಯನವರು ಆರಾಧ್ಯಮಠ, ಚನ್ನಬಸಯ್ಯ ದುರ್ಗದಮಠ, ಈರಣ್ಣ ತೆಗ್ಗಿಹಳ್ಳಿ, ಸಿ.ಎನ್. ಪಾಟೀಲ, ಮಂಜುನಾಥ ಶೆಟ್ಟರ, ಆನಂದಪ್ಪ ಬಿಕ್ಕಣ್ಣನವರ, ಸಂತೋಷ ಗುಡಿಸಾಗರ, ರುದ್ರಪ್ಪ ಕುಂಬಾರ, ಸರ್ವಮಂಗಲಾ ಕೇರಿಯವರ, ಪುಷ್ಪಾ ಬತ್ತಿ, ಸುನಂದಾ ಚಿನ್ನಾಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.