ADVERTISEMENT

ಸೇವಾ ಮನೋಭಾವನೆ: ವೃತ್ತಿ ಕೌಶಲ ಹೆಚ್ಚಳ

ಶಿಗ್ಗಾವಿ ತಾಲ್ಲೂಕು ಆಸ್ಪತ್ರೆ ವೈದ್ಯೆ ರೈಸಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:39 IST
Last Updated 15 ಮೇ 2025, 16:39 IST
ಶಿಗ್ಗಾವಿ ಪಟ್ಟಣದ ಫಿನಿಕ್ಸ್ ಇಂಟರನ್ಯಾಷನಲ್ ಕಾಲೇಜಿನಲ್ಲಿ ಪ್ಲಾರೆನ್ಸ್ ನೈಟಿಂಗಲ್ ದಿನಾಚರಣೆ ಕಾರ್ಯಕ್ರಮ ಜರುಗಿತು.
ಶಿಗ್ಗಾವಿ ಪಟ್ಟಣದ ಫಿನಿಕ್ಸ್ ಇಂಟರನ್ಯಾಷನಲ್ ಕಾಲೇಜಿನಲ್ಲಿ ಪ್ಲಾರೆನ್ಸ್ ನೈಟಿಂಗಲ್ ದಿನಾಚರಣೆ ಕಾರ್ಯಕ್ರಮ ಜರುಗಿತು.   

ಪ್ರಜಾವಾಣಿ ವಾರ್ತೆ

ಶಿಗ್ಗಾವಿ: ಕಾಯಕ ಯಾವುದೇ ಇರಲಿ ಅದರಲ್ಲಿ ತೃಪ್ತಿ ಪಡುವ ಜತೆಗೆ ವೃತ್ತಿ ಗೌರವಿಸಬೇಕು. ಅಲ್ಲದೆ ಸೇವಾ ಮನೋಭಾವನೆಗಳು ವೃತ್ತಿ ಕೌಶಲ ಹೆಚ್ಚಿಸಲು ಸಾಧ್ಯವಿದೆ. ಅದಕ್ಕೆ ದಾದಿಯರ ಸೇವೆ ಸಾಕ್ಷಿಯಾಗಿದೆ ಎಂದು ತಾಲ್ಲೂಕು ಆಸ್ಪತ್ರೆ ವೈದ್ಯೆ ರೈಸಾ ಹೇಳಿದರು.

ಪಟ್ಟಣದ ಫಿನಿಕ್ಸ್ ಇಂಟರ್‌ನ್ಯಾಷನಲ್ ಸಮೂಹ ಸಂಸ್ಥೆಯ ಬಿಎಸ್ಸಿ ನರ್ಸಿಂಗ್‌ ಕಾಲೇಜಿನಲಿ ಮಂಗಳವಾರ ನಡೆದ ಫ್ಲಾರೆನ್ಸ್ ನೈಟಿಂಗಲ್ (ದಾದಿಯರ ದಿನಾಚರಣೆ)ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ನೈಟಿಂಗೇಲ್ ಹುಟ್ಟಿದ ದಿನವನ್ನು ಅವರ ನಿಸ್ವಾರ್ಥ ಸೇವೆ ಸ್ಮರಿಸುವುದರ ಜೊತೆಯಲ್ಲೇ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರ ಸೇವೆಯನ್ನೂ ಸ್ಮರಿಸಲಾಗುತ್ತದೆ ಎಂದರು.

ಫಿನಿಕ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ರಾಣಿ ಎಂ.ತಿರ್ಲಾಪುರ ಮಾತನಾಡಿ, ಸಾವಿರಾರು ಸೈನಿಕರು ಇಂದಿನ ಮಿಲಿಟರಿ ನರ್ಸಿಂಗ್‌ ಸೇವೆಗಳಿಗೆ ನೈಟಿಂಗೇಲ್ ಹಾಕಿಕೊಟ್ಟ ಮಾರ್ಗವೇ ಭದ್ರ ಬುನಾದಿಯಾಗಿದೆ. ಅಲ್ಲದೇ ಶುಶ್ರೂಷಕರ ಕೊರತೆಯನ್ನು ನಿವಾರಿಸುವಲ್ಲಿ ಸರ್ಕಾರವು ಸರ್ಕಾರಿ ಆಸ್ಪತ್ರೆ, ಸ್ಪೆಷಾಲಿಟಿ ಆಸ್ಪತ್ರೆ, ವಿವಿಧ ತೀವ್ರ ನಿಗಾ ಘಟಕ ಹಾಗೂ ಕ್ರಿಟಿಕಲ್ ಕೇರ್ ವಿಭಾಗಗಳಲ್ಲಿ ಶುಶ್ರೂಷಕರಿಗೆ ಅತಿ ಹೆಚ್ಚು ಬೇಡಿಕೆಯಿದೆ. ವಿದೇಶಗಳಲ್ಲಿ ಭಾರತೀಯ ಶುಶ್ರೂಷಕರಿಗೆ ಅತಿಹೆಚ್ಚು ಬೇಡಿಕೆ ಇದೆ ಹಾಗೂ ಹೆಚ್ಚು ಸಂಭಾವನೆ ಇದೆ ಎಂದ ಅವರು, ತಾಲ್ಲೂಕಿನ ಯುವಜನತೆ ಫಿನಿಕ್ಸ್ ಸಮೂಹ ಸಂಸ್ಥೆಯ ಬಿಎಸ್ಸಿ ನರ್ಸಿಂಗ್‌ ಕಾಲೇಜಿನ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಯಾಗಲು ಒಳ್ಳೆಯ ಅವಕಾಶವಿದೆ ಎಂದರು.

ನರ್ಸಿಂಗ್‌ ಕಾಲೇಜು ಪ್ರಾಚಾರ್ಯ ಪ್ರಭು.ಕೆ.ಮಾತನಾಡಿ, ಯುದ್ಧದಲ್ಲಿ ಅವರು ಸಲ್ಲಿಸಿರುವ ಶುಶ್ರೂಷಾ ಸೇವೆ ಅಗಾಧವಾಗಿದ್ದು, ಅವರ ಅಂತಹ ಸೇವೆಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಎಂದರು. 

ಫಿನಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪುರ, ಉಪಾಧ್ಯಕ್ಷ ನರಹರಿ ಕಟ್ಟಿ, ಶಿಕ್ಷಕ ಶಶಾಂಕ ಕೌಜಲಗಿ ಸೇರಿದಂತೆ ನಸಿರ್ಂಗ್ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.