ಪ್ರಜಾವಾಣಿ ವಾರ್ತೆ
ಬ್ಯಾಡಗಿ: ನಗರ ಆಶ್ರಯ ಯೋಜನೆಯಡಿ ಇಲ್ಲಿಯ ಫಲಾನುಭವಿಗಳಿಗೆ ಆ. 15ರಂದು ನಡೆಯಬೇಕಿದ್ದ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಕೆಲ ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್‌ಮುನಾಫ್ ಎರೆಶೀಮಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್‌ಸಿ/ಎಸ್‌ಟಿ ಹಾಗೂ ಇತರ ಪಂಗಡಗಳಿಗೆ ಸೇರಿದ ಜಾತಿ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆಗಳನ್ನು ಫಲಾನುಭವಿಗಳು ಸಕಾಲಕ್ಕೆ ಒದಗಿಸಲು ಸಾಧ್ಯವಾಗದ ಕಾರಣ ಪ್ರಕ್ರಿಯೆ ವಿಳಂಬವಾಗಿದೆ. ರಾಜೀವ ಗಾಂಧಿ ಹೌಸಿಂಗ್ ನಿಗಮಕ್ಕೆ ತಲಾ ₹ 30 ಸಾವಿರ ವಂತಿಗೆಯನ್ನು 500ಕ್ಕೂ ಹೆಚ್ಚು ನಿವೇಶನ ರಹಿತರು ತುಂಬಿದ್ದಾರೆ. ಆದರೆ ಮಲ್ಲೂರು ರಸ್ತೆಯಲ್ಲಿ ಕೇವಲ 417 ನಿವೇಶನಗಳಿವೆ. ಹೀಗಾಗಿ ಮತ್ತೆ 20 ಎಕರೆ ಜಾಗ ಖರೀದಿಸಲು ಸರ್ಕಾರ ಮುಂದಾಗಿದೆ. ಅರ್ಹ ಬಡ ನಿವೇಶನ ರಹಿತ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.