ADVERTISEMENT

ಜಾನಪದ ವಿವಿ: ಸೊಲಬಕ್ಕನವರ ಅವರಿಗೆ ಗೌರವ ಡಾಕ್ಟರೇಟ್ 

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 6:49 IST
Last Updated 29 ಅಕ್ಟೋಬರ್ 2018, 6:49 IST
ಟಿ. ಬಿ. ಸೊಲಬಕ್ಕನವರ
ಟಿ. ಬಿ. ಸೊಲಬಕ್ಕನವರ   

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಅ. 31ರಂದು ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿನ ವಿ. ವಿ. ಆವರಣದಲ್ಲಿ ನಡೆಯಲಿದ್ದು, ದೊಡ್ಡಾಟ ಕಲಾವಿದರಾದ ಉತ್ಸವ ರಾಕ್ ಗಾರ್ಡನ್ ನ ಟಿ. ಬಿ. ಸೊಲಬಕ್ಕನವರ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ. ಡಿ. ಬಿ. ನಾಯಕ ತಿಳಿಸಿದರು.

ಆನ್ವಯಿಕ ಜಾನಪದ ನಿಕಾಯದ ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ ವಿಭಾಗದ ಮೀರಾ ಎಚ್. ಎನ್. 'ಗ್ರಾಮೀಣ ಉದ್ಯಮದ ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯ ಕುರಿತು ಪ್ರೊ. ಚಂದ್ರ ಪೂಜಾರಿ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ವಿ. ವಿ. ಯು ತನ್ನ ಚೊಚ್ಚಲ ಡಾಕ್ಟರೇಟ್ ಪ್ರದಾನ ಮಾಡಲಿದೆ. ಈ ಬಾರಿ ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ (ಮೊದಲ ರ್ಯಾಂಕ್) ಪ್ರದಾನ ಮಾಡಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಪ್ರದಾನ ಮಾಡುವರು. ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಘಟಿಕೋತ್ಸವ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT