ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಕುಸಿತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:37 IST
Last Updated 28 ಮಾರ್ಚ್ 2024, 14:37 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ ರಾಶಿ ಮಾಡುತ್ತಿರುವ ದೃಶ್ಯ&nbsp;</p></div>

ಬ್ಯಾಡಗಿ ಮೆಣಸಿನಕಾಯಿ ರಾಶಿ ಮಾಡುತ್ತಿರುವ ದೃಶ್ಯ 

   

ಬ್ಯಾಡಗಿ : ಇಲ್ಲಿಯ ಅಂತರರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 1,37,863 ಚೀಲ (34,465 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು ಆವಕದಲ್ಲಿ ದಿಢೀರ್‌ ಕುಸಿತವಾಗಿದೆ.

ಕಳೆದ ಸೋಮವಾರ 2,07,286 ಚೀಲ (51,821 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ, ರಂಗಪಂಚಮಿ ಹಾಗೂ ಜಾತ್ರೆಗಳ ಕಾರಣದಿಂದಾಗಿ ಆವಕದಲ್ಲಿ ಕುಸಿತವಾಗಿದೆ ಎನ್ನಲಾಗಿದೆ.

ADVERTISEMENT

ಗುರುವಾರ ಒಟ್ಟಾರೆ 16,842 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟವಿಲ್ಲದ 376 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 35 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹36,909 ರಂತೆ, 15 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹30,000ರಂತೆ ಮತ್ತು ಗುಂಟೂರು ತಳಿ ₹17,289 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹33,009, ಬ್ಯಾಡಗಿ ಕಡ್ಡಿ ₹27,109 ಹಾಗೂ ಗುಂಟೂರ ತಳಿ ₹12,029 ರಂತೆ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ.

ಗುರುವಾರ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 293 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.