ADVERTISEMENT

ಸಾತ್ವಿಕ ವಿಚಾರ ರೂಢಿಸಿಕೊಳ್ಳಿ

ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವ: ಬ್ರಹ್ಮಾನಂದ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:40 IST
Last Updated 12 ಏಪ್ರಿಲ್ 2025, 15:40 IST
ತಡಸ ಸಮೀಪದ ಗಾಯತ್ರಿ ತಪೋವನದ ರಜತ ಮಹೋತ್ಸವಕ್ಕೆ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ಆಚಾರ್ಯ ಚೈತನ್ಯ ಕಾಯ್ಕಿಣಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು
ತಡಸ ಸಮೀಪದ ಗಾಯತ್ರಿ ತಪೋವನದ ರಜತ ಮಹೋತ್ಸವಕ್ಕೆ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ಆಚಾರ್ಯ ಚೈತನ್ಯ ಕಾಯ್ಕಿಣಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು   

ತಡಸ: ‘ರಾಮ ನಾಮದ ಮಹತ್ವ ಮತ್ತು ಪ್ರಯೋಜನ ಅರಿತು, ಸತ್ಸಂಗದೊಂದಿಗೆ ಸಾತ್ವಿಕ ವಿಚಾರ  ಮೈಗೂಡಿಸಿಕೊಂಡರೆ ಹನುಮ ಭಕ್ತಿ, ರಾಮಶಕ್ತಿ ನಮ್ಮದಾಗಲಿ’ ಎಂದು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.

ಸಮೀಪದ ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರವಚನ  ನೀಡಿದರು.

‘ತಪೋಭೂಮಿಯಲ್ಲಿ ನಿಸ್ವಾರ್ಥ ಸೇವೆ ನೀಡಲಾಗುತ್ತಿದೆ. ಆರೋಗ್ಯ ಉಚಿತ ಶಿಬಿರ, 20 ವರ್ಷಗಳಿಂದ ಅಗತ್ಯ ಔಷಧ ವಿತರಣೆ, 60 ಹಸುಗಳಿರುವ ಗೋಶಾಲೆ, ಬಹುಭಾಷಾ ಗ್ರಂಥಾಲಯ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

‘ಉದಾತ್ತ ಸೇವೆಗಳಲ್ಲಿ ಅನ್ನದಾನ ಸರ್ವೋಚ್ಛವಾಗಿದೆ. 25 ವರ್ಷಗಳಿಂದ ಪ್ರತಿದಿನ ಆಶ್ರಮದಲ್ಲಿ 500 ಭಕ್ತರಿಗೆ ಅನ್ನದಾನ ಮಾಡುತ್ತಿರುವುದು ಆದರ್ಶನೀಯವಾಗಿದೆ’ ಎಂದು ಹೇಳಿದರು.

ADVERTISEMENT

ಸಿಂದಗಿ ಮಠದ ಪೀಠಾಧೀಶ ದತ್ತಪ್ಪಯ್ಯ ಸ್ವಾಮೀಜಿ ಮಾತನಾಡಿ, ‘ಗಾಯತ್ರಿ ತಪೋವನದಲ್ಲಿ ಭೇದ ಭಾವ ಇಲ್ಲದೆ, ಎಲ್ಲರೂ ಒಂದೇ ಎನ್ನುವ ಸಂಸ್ಕೃತಿ ಇದೆ. ಇದನ್ನು ಎಲ್ಲ ಮಠಗಳು ಪಾಲಿಸಬೇಕಿದೆ’ ಎಂದು ತಿಳಿಸಿದರು.

ಆಚಾರ್ಯ ಚೈತನ್ಯ ಕಾಯ್ಕಿಣಿ ಇದ್ದರು. ಗಾನಸೌರಭ ತಂಡದಿಂದ ‘ಮಾಯ ಮಂಥರೆ’ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.

ಇಂದಿನ ಕಾರ್ಯಕ್ರಮ: ಏಪ್ರಿಲ್ 13ರಂದು ಸಂಜೆ 5 ಗಂಟೆಗೆ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳುವರುರು.

ತಡಸ ಸಮೀಪದ ಗಾಯತ್ರೀ ತಪೋ ವನದ ರಜತ್ ಮಹೋತ್ಸವದ ಗಾನಸೌರಭ ತಂಡದಿಂದ ಪ್ರಸ್ತುತಗೊಂಡ
ತಡಸ ಸಮೀಪದ ಗಾಯತ್ರೀ ತಪೋ ವನದ ರಜತ್ ಮಹೋತ್ಸವದ ಋಗ್ವೇದ ಪಾರಾಯಣ ಚತುರ್ವೇದ ಪಾರಾಯಣ ಶತಚಂಡಿಪಾರಾಯಣ ಅರುಣ ಪ್ರಶ್ನ ಹವನ ಗಾಯತ್ರಿ ಹವನ ಮುಂತಾದ ಹವನಗಳು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.