ADVERTISEMENT

ರಾಣೆಬೆನ್ನೂರು: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:22 IST
Last Updated 3 ಜೂನ್ 2025, 14:22 IST
ರಾಣೆಬೆನ್ನೂರಿನ ವಿಶ್ವವಿಭು ರೇಕಿ ಧ್ಯಾನಪೀಠ (ಆಧ್ಯಾತ್ಮ ಶಕ್ತಿ ಉಪಚಾರ ಕೇಂದ್ರ)ದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಬ್ರಾಹ್ಮಣ ಸಮಾಜದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು 
ರಾಣೆಬೆನ್ನೂರಿನ ವಿಶ್ವವಿಭು ರೇಕಿ ಧ್ಯಾನಪೀಠ (ಆಧ್ಯಾತ್ಮ ಶಕ್ತಿ ಉಪಚಾರ ಕೇಂದ್ರ)ದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಬ್ರಾಹ್ಮಣ ಸಮಾಜದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು    

ರಾಣೆಬೆನ್ನೂರು: ವಿದ್ಯಾರ್ಥಿಗಳು ಶಿಸ್ತಿನಿಂದ ನಿರಂತರ ಅಧ್ಯಯನ ಕೈಗೊಳ್ಳಬೇಕು. ನಿಮ್ಮ ಕನಸುಗಳಿಗೆ ಪಾಲಕರು ಹಾಗೂ ವಿಶ್ಸಕರ್ಮ ಬ್ರಾಹ್ಮಣ ಸಮಾಜ ಬೆನ್ನೆಲುಬಾಗಿರುತ್ತದೆ. ವಿದ್ಯೆ ಯಾರೂ ಕದಿಯಲಾರದ, ಹಂಚಿದಷ್ಟು ಹೆಚ್ಚಾಗುವ ವಿದ್ಯೆಯೇ ಸಂಪತ್ತು ಎಂದು ರಟ್ಟೀಹಳ್ಳಿ ಪಿಯು ಕಾಲೇಜಿನ ಪ್ರಾಚಾರ್ಯ ಗುಡ್ಡಾಚಾರಿ ಕಮ್ಮಾರ ಹೇಳಿದರು.

ಇಲ್ಲಿನ ಉಮಾಶಂಕರ ನಗರದಲ್ಲಿರುವ ಶ್ರೀವಿಶ್ವವಿಭು ರೇಕಿ ಧ್ಯಾನಪೀಠ (ಆಧ್ಯಾತ್ಮ ಶಕ್ತಿ ಉಪಚಾರ ಕೇಂದ್ರ)ದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಬ್ರಾಹ್ಮಣ ಸಮಾಜದಿಂದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ವಿಶ್ವವಿಭು ರೇಕಿ ಧ್ಯಾನಪೀಠದ ಆಚಾರ್ಯ ಮೌನೇಶ್ವರ ಗುರೂಜೀ ಸಾನ್ನಿಧ್ಯ ವಹಿಸಿದ್ದರು.

ADVERTISEMENT

ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಾದ ಸ್ವಪ್ನ.ಕೆ.ಅರ್ಕಸಾಲಿ, ಕಾರ್ತೀಕ.ಕೆ.ಅರ್ಕಾಚಾರಿ, ಮೃಣ್ಮಯಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ನಯನಾ ಮಾಯಾಚಾರಿ, ವೈಷ್ಣವಿ ಮಾಯಾಚಾರಿ, ಪ್ರೇರಣಾ ಬಡಿಗೇರ ಅವರನ್ನು ಗುರೂಜಿ ಸನ್ಮಾನಿಸಿದರು.

ಚಾಮರಾಜ ಕಮ್ಮಾರ, ಪ್ರಕಾಶ ಕಮ್ಮಾರ, ಲಕ್ಷ್ಮಿದೇವಿ ಅಮ್ಮನವರ, ಬಸವರಾಜ ಬಡಿಗೇರ, ಗುರೂಜೀ ಮಲ್ಲಿಕಾರ್ಜುನ ಆಚಾರ್ಯ, ಕೃಷ್ಣ ಬಡಿಗೇರ, ಸುರೇಶ ಬಡಿಗೇರ, ಕೃಷ್ಣ ಬಡಿಗೇರ, ಪ್ರೇಮಾ ನಿಂಬರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.