ADVERTISEMENT

ಹಾವೇರಿ: ಸಂಭ್ರಮದ ತುಳಸಿ ಪೂಜೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 15:04 IST
Last Updated 26 ನವೆಂಬರ್ 2020, 15:04 IST
ಹಾವೇರಿ ನಗರದಲ್ಲಿ ಗುರುವಾರ ‘ತುಳಸಿ ಪೂಜೆ’ ಅಂಗವಾಗಿ ಮಹಿಳೆಯರು ಹುಣಸೆಹಣ್ಣು ಮತ್ತು ನೆಲ್ಲಿಕಾಯಿ ಖರೀದಿಸಿದರು 
ಹಾವೇರಿ ನಗರದಲ್ಲಿ ಗುರುವಾರ ‘ತುಳಸಿ ಪೂಜೆ’ ಅಂಗವಾಗಿ ಮಹಿಳೆಯರು ಹುಣಸೆಹಣ್ಣು ಮತ್ತು ನೆಲ್ಲಿಕಾಯಿ ಖರೀದಿಸಿದರು    

ಹಾವೇರಿ: ಜಿಲ್ಲೆಯಾದ್ಯಂತ ಮಹಿಳೆಯರು ತುಳಸಿ ಪೂಜೆಯನ್ನು ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಭಗವಾನ್‌ ವಿಷ್ಣುವನ್ನು ಪ್ರಾರ್ಥಿಸಿದರು.

ಮನೆಗಳ ಮುಂಭಾಗ ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡಗಳನ್ನು ಇಟ್ಟು, ಪೂಜಿಸಿದರು. ಗಿಡಗಳಿಗೆ ಹೂವಿನ ಅಲಂಕಾರ, ದೀಪಾಲಂಕಾರ ಮಾಡಲಾಗಿತ್ತು. ಮನೆಯ ಅಂಗಳದಲ್ಲಿ ವಿಶೇಷ ರಂಗೋಲಿ ಚಿತ್ತಾರಗಳು ಗಮನ ಸೆಳೆದವು. ಮನೆಯ ಬಾಗಿಲು ಮಾವಿನ ತೋರಣ, ಹೂವಿನ ತೋರಣಗಳಿಂದ ಕಂಗೊಳಿಸಿದವು.

ತುಳಸಿ ಪೂಜೆ ಎಂಬುದು ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಾಗಿದೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ‘ಉತ್ಥಾನ ದ್ವಾದಶಿ’ ಎಂದು ಆಚರಿಸಲಾಗುತ್ತದೆ.

ADVERTISEMENT

ನಗರದ ಎಂ.ಜಿ.ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಬಾಳೆಕಂದು, ಮಾವಿನ ತೋರಣ, ಹುಣಸೆಹಣ್ಣು, ಬೆಟ್ಟದ ನೆಲ್ಲಿಕಾಯಿ, ಹೂವುಗಳ ಖರೀದಿ ಭರಾಟೆ ಕಂಡು ಬಂದಿತು. ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಕೆಲವು ಮಕ್ಕಳು ಸಡಗರದಿಂದ ದೀಪ ಬೆಳಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.