ಗುತ್ತಲ: ಸಮೀಪದ ಹಾಲಾಗಿ ಗ್ರಾಮದಲ್ಲಿ ಯುವಕನೊಬ್ಬ ಸೋಮವಾರ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಪ್ಪಳ ಜಿಲ್ಲಾ ಕಿನ್ನಾಳ ಗ್ರಾಮದ ಶರಣಪ್ಪ ಹನಮಪ್ಪ ಆರೇರ(28) ಮೃತರು.
ಒಂದು ವರ್ಷದಿಂದ ಹಾಲಗಿ ಗ್ರಾಮದ ಸಂಬಂಧಿಕರ ಮನೆಯ ಪಕ್ಕದಲ್ಲಿ ತಗಡಿನ ಶೇಡ್‌ನಲ್ಲಿ ತಾಯಿ ಜೊತೆ ವಾಸಿಸುತ್ತಿದ್ದರು.
‘₹5 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ವರದಾ ನದಿಗೆ ಭಾರಿ ಪ್ರಮಾಣದ ನೀರು ಇರುವುದರಿಂದ ಶವ ಪತ್ತೆ ಮಾಡುವುದು ಕಷ್ಟ’ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.