ADVERTISEMENT

ಖಮರುಲ್ ಇಸ್ಲಾಂ ಪತ್ನಿಗೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 10:18 IST
Last Updated 31 ಮಾರ್ಚ್ 2018, 10:18 IST

ಕಲಬುರ್ಗಿ: ಕಲಬುರ್ಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ದಿ.ಖಮರುಲ್ ಇಸ್ಲಾಂ ಅವರ ಪತ್ನಿ ಖನ್ನೀಸಾ ಫಾತಿಮಾ ಬೇಗಂ ಅವರ ಮನವೊಲಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ.‘ಕಲಬುರ್ಗಿ ಉತ್ತರ ಕ್ಷೇತ್ರದಿಂದ ಫಾತಿಮಾ ಅವರಿಗೆ ಟಿಕೆಟ್ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಒಮ್ಮತದ ನಿರ್ಣಯ ಕೈಗೊಂಡು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

‘ಆರಂಭದಲ್ಲಿ ಫಾತಿಮಾ ಬೇಗಂ ಅವರು ಸ್ಪರ್ಧೆಗೆ ಒಪ್ಪಿರಲಿಲ್ಲ. ಖಮರುಲ್ ರಾಜಕೀಯದಲ್ಲಿದ್ದರು. ನನಗೆ ಹೆಚ್ಚಿನ ತಿಳಿವಳಿಕೆ ಇಲ್ಲ ಎಂಬ ಕಾರಣ ಹೇಳಿದ್ದರು. ಆದರೆ ಪಕ್ಷದ ಸಮೀಕ್ಷೆಯಲ್ಲಿ ಇವರ ಹೆಸರೇ ಮುಂಚೂಣಿಯಲ್ಲಿ ಇದ್ದ ಕಾರಣ ಸ್ಪರ್ಧೆಗೆ ಅವರ ಮನವೊಲಿಸಲಾಗಿದೆ’ ಎಂಬುದು ಮೂಲಗಳ ವಿವರಣೆ.ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವಿಭಾಗೀಯ ಅಧ್ಯಕ್ಷ ಬಾಬಾ ನಜರ್ ಮಹಮ್ಮದ್ ಖಾನ್, ಖಮರುಲ್ ಅವರ ಸಹೋದರ ಅನ್ವರ್ ಉಲ್ ಇಸ್ಲಾಂ, ಪಾಲಿಕೆ ಸದಸ್ಯರಾದ ಭೀಮರೆಡ್ಡಿ ಪಾಟೀಲ, ರಫೀಕ್ ಖಾನ್, ಅಲೀಮ್ ಪಟೇಲ್, ಅಜಮಲ್ ಗೋಲಾ, ಅಸ್ಲಂ ಭಾಷಾ, ಶೇಖ್ ಬಾಬಾ, ಮುಖಂಡರಾದ ವಿಜಯಕುಮಾರ್ ಹದಗಿಲ್, ಫಾರುಕ್ ಅಹಮ್ಮದ್, ಆರೀಫ್ ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT