ADVERTISEMENT

ಪಾಠದಷ್ಟೇ ಆಟವೂ ಮುಖ್ಯ

ಕೃತಿ ಬಿಡುಗಡೆ ಕಾರ್ಯಕ್ರಮ: ಡಾ.ಶರಣಬಸವಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 8:35 IST
Last Updated 29 ಜನವರಿ 2016, 8:35 IST
ಕಲಬುರ್ಗಿಯ ಗೋದುತಾಯಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಜಾನಕಿ ಹೊಸುರ ಬರೆದ ಹೈದ್ರಾಬಾದ್ ಕರ್ನಾಟಕದ ದೇಶಿಯ ಕ್ರೀಡೆಗಳು ಕೃತಿಯನ್ನು ಡಾ.ಶರಣಬಸವಪ್ಪ ಅಪ್ಪ ಬುಧವಾರ ಬಿಡುಗಡೆ ಮಾಡಿದರು
ಕಲಬುರ್ಗಿಯ ಗೋದುತಾಯಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಜಾನಕಿ ಹೊಸುರ ಬರೆದ ಹೈದ್ರಾಬಾದ್ ಕರ್ನಾಟಕದ ದೇಶಿಯ ಕ್ರೀಡೆಗಳು ಕೃತಿಯನ್ನು ಡಾ.ಶರಣಬಸವಪ್ಪ ಅಪ್ಪ ಬುಧವಾರ ಬಿಡುಗಡೆ ಮಾಡಿದರು   

ಕಲಬುರ್ಗಿ: ವಿದ್ಯಾರ್ಥಿ ಜೀವನದಲ್ಲಿ ಓದುವುದರ ಜೊತೆಗೆ ದೈಹಿಕ ಕಸರತ್ತು ಮಾಡುವುದರಿಂದ ಮಾನಸಿಕ ಸಮತೋಲನ ಕಾಪಾಡಿಕೊಂಡು ಹೋಗಬಹುದು ಎಂದು ಮಹಾ ದಾಸೋಹ ಪೀಠದ ಪೀಠಾಧಿಪತಿ ಡಾ. ಶರಣಬಸವಪ್ಪ ಹೇಳಿದರು.

ನಗರದ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಜಾನಕಿ ಹೊಸುರ ಬರೆದ ಹೈದ್ರಾಬಾದ್ ಕರ್ನಾಟಕದ ದೇಶಿಯ ಕ್ರೀಡೆಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಬುದ್ಧಿಗೆ ಕಸರತ್ತು ಕೊಡುವ ಆಟಗಳನ್ನು ಆಡಿ ನಮ್ಮ ಮನ ಮನಸ್ಸುಗಳಿಗೆ ಕೆಲಸ ಕೊಡಬೇಕು. ಇದರಿಂದ ಮನುಷ್ಯ ಭೌತಿಕವಾಗಿ ವಿಕಾಸವಾಗುತ್ತಾನೆ. ಜೀವನದಲ್ಲಿ ಆಟವು ಪಾಠದಷ್ಟೆ ಮಹತ್ವದ ಸ್ಥಾನ ಪಡೆದಿದೆ’ ಎಂದು ಹೇಳಿದರು.

ದೇಶಿಯ ಕ್ರೀಡೆಗಳು ಅವಸಾನದ ಅಂಚಿನಲ್ಲಿವೆ. ಅಪ್ಪಟ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಅವು ಗಳನ್ನು ಮಕ್ಕಳಿಗೆ ಕಲಿಸಿ ಅವರಿಂದ ಆಡಿಸುವುದರ ಮೂಲಕ ಉಳಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು

ಗ್ರಾಮೀಣ ಕ್ರೀಡೆಗಳಿಗೆ ಪುನರು ಜ್ಜೀವನ ಕೊಡುವ ಪ್ರಯತ್ನ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಅದರ ಪರಿಣಾಮದಿಂದಲೆ ಇಂದು ಪ್ರೊ ಕಬಡ್ಡಿ, ಪ್ರೊ ಟೆನಿಸ್, ಪ್ರೊ ಕೊಕ್ಕೊ ಕಾಣುತ್ತಿದ್ದೇವೆ. ದೇಶಿಯ ಆಟಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಡಾ. ನೀಲಾಂಬಿಕಾ ಶೇರಿಕಾರ್, ಡಾ. ಎಸ್ ಜಿ ಡೊಳ್ಳೆಗೌಡ್ರು, ಡಾ. ಸೀಮಾ ಪಾಟೀಲ್, ಪ್ರೊ. ಜಾನಕಿ ಹೊಸುರ, ಪ್ರೊ. ದಯಾನಂದ ಹೊಡಲ್, ಪ್ರೊ. ಮಹೇಶ ನೀಲೆಗಾರ, ಪ್ರೊ. ಎಸ್. ಎಸ್. ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.