ADVERTISEMENT

ಕಲಬುರ್ಗಿಯಲ್ಲಿ ನಿಷೇಧಾಜ್ಞೆ: ಶಾಲಾ‌ ಕಾಲೇಜುಗಳಿಗೂ ರಜೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 2:10 IST
Last Updated 19 ಡಿಸೆಂಬರ್ 2019, 2:10 IST
ನಿಷೇಧಾಜ್ಞೆ (ಸಾಂದರ್ಭಿಕ ಚಿತ್ರ)
ನಿಷೇಧಾಜ್ಞೆ (ಸಾಂದರ್ಭಿಕ ಚಿತ್ರ)   

ಕಲಬುರ್ಗಿ: ಇದೇ 19ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಕಲಬುರ್ಗಿ ಬಂದ್‌ಗೆ ಕರೆ ನೀಡಿರುವುದರಿಂದ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

‘ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಘೋಷಿಸಲಾಗಿದೆ‌. ಹೀಗಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ‌ಮಾಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಶರತ್ ಬಿ. 'ಪ್ರಜಾವಾಣಿ'ಗೆ ತಿಳಿಸಿದರು.

ಕಲಬುರ್ಗಿ ಪೀಪಲ್ಸ್ ಫೋರಂ ವತಿಯಿಂದ ಇಂದು ಬಂದ್ ಕರೆ ನೀಡಿದ್ದರೂ ನಗರದಲ್ಲಿ ಜನಸಂಚಾರ ಎಂದಿನಂತಿದೆ.ಬಂದ್ ‌ಹಾಗೂ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅವಕಾಶ ‌ನೀಡಿಲ್ಲ.

ADVERTISEMENT
ಕಲಬುರ್ಗಿ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್‌ ಸಂಚಾರ ಎಂದಿನಂತೆ ಇತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.