ಕಲಬುರಗಿ: ಇಲ್ಲಿನ ಪೊಲೀಸ್ ಭವನದ ಬಳಿ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರ ಸರ್ಕಾರಿ ನಿವಾಸದಲ್ಲಿ ಬೆಳಗಿನ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಅಚ್ಚರಿ ಕಾದಿತ್ತು.
ಸುಮಾರು ಏಳು ಅಡಿ ಗಾತ್ರದ ವಿಷಕಾರಿಯಲ್ಲದ ಕೆರೆಹಾವುಗಳು (ಇಂಡಿಯನ್ ರ್ಯಾಟ್ ಸ್ನೇಕ್) ಪತ್ತೆಯಾಗಿವೆ.
ಮನೆಯ ಈಜುಕೊಳದ ಪಕ್ಕದ ಕೊಠಡಿಯಲ್ಲಿದ್ದ ಹಾವುಗಳನ್ನು ಕಂಡ ಎಸ್ಪಿ ಅವರು ಸಿಬ್ಬಂದಿ ಮೂಲಕ ಉರಗ ರಕ್ಷಕ ಪ್ರಶಾಂತ ಪಾಟೀಲ ಅವರಿಗೆ ಕರೆ ಮಾಡಿಸಿದ್ದಾರೆ.
ತಕ್ಷಣ ಬಂದ ಪ್ರಶಾಂತ ಹಾವುಗಳನ್ನು ಹಿಡಿದರು. ವಿಷಕಾರಿಯಲ್ಲವೆಂದು ತಿಳಿದ ಎಸ್ಪಿ ಇಶಾ ಹಾವುಗಳನ್ನು ಹಿಡಿದು ಖುಷಿಪಟ್ಟರು.
ನಂತರ ಅವುಗಳನ್ನು ಪ್ರಶಾಂತ ಪಾಟೀಲ ಊರ ಹೊರಭಾಗದಲ್ಲಿ ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.