ADVERTISEMENT

ಕಲ್ಯಾಣ ಕರ್ನಾಟಕ್ಕೆ 47,411 ಮನೆ ಮಂಜೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 16:28 IST
Last Updated 21 ಸೆಪ್ಟೆಂಬರ್ 2022, 16:28 IST
ಸುನೀಲ ವಲ್ಯಾಪುರೆ
ಸುನೀಲ ವಲ್ಯಾಪುರೆ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗ ಹಾಗೂ ವಿಜಯಪುರ ಸೇರಿದಂತೆ ಎಂಟು ಜಿಲ್ಲೆಗಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 47,411 ವಸತಿ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನೀಲ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2019–20ರಿಂದ 2021–22ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ 47,411 ಮನೆಗಳನ್ನು ಮಂಜೂರು ಮಾಡಿ, ಕಾಮಗಾರಿ ಆದೇಶ ಹೊರಡಿಸಲಾಗಿದೆ. ಮನೆಗಳ ಜಿಪಿಎಸ್‌ ಭೌತಿಕ ಪ್ರಗತಿಗೆ ಅನುಗುಣವಾಗಿ ₹ 49.69 ಕೋಟಿ ಖರ್ಚು ಮಾಡಲಾಗಿದೆ’ ಎಂದಿದ್ದಾರೆ.

‘ಈ ಮೂರು ವರ್ಷಗಳಲ್ಲಿ ಕಲಬುರಗಿಗೆ 6,645, ಬಳ್ಳಾರಿಗೆ 3,387, ಬೀದರ್‌ಗೆ 4,509, ಕೊಪ್ಪಳಕ್ಕೆ 8,005, ರಾಯಚೂರಿಗೆ 7,073, ವಿಜಯನಗರಕ್ಕೆ 6,303, ಯಾದಗಿರಿಗೆ 5,177 ಹಾಗೂವಿಜಯಪುರಕ್ಕೆ 6,312 ಮನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘2021–22ನೇ ಸಾಲಿನ ವರ್ಷ ಹೊರತುಪಡಿಸಿ ಉಳಿದ ವರ್ಷಗಳಲ್ಲಿ ಕಲಬುರಗಿಗೆ ₹ 7.98 ಕೋಟಿ, ಬಳ್ಳಾರಿಗೆ ₹ 1.20ಕೋಟಿ, ಬೀದರ್‌ಗೆ ₹ 1.28 ಕೋಟಿ, ಕೊಪ್ಪಳಕ್ಕೆ ₹ 12.53 ಕೋಟಿ, ರಾಯಚೂರಿಗೆ ₹ 9.59 ಕೋಟಿ, ವಿಜಯನಗರಕ್ಕೆ ₹ 3.45 ಕೋಟಿ, ವಿಜಯಪುರಕ್ಕೆ ₹ 6.66 ಕೋಟಿ ಹಾಗೂ ಯಾದಗಿರಿಗೆ ₹ 7ಕೋಟಿ ಅನುದಾನ ವಿನಿಯೋಗಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘2021–22ನೇ ಸಾಲಿನಲ್ಲಿ ಎಂಟು ಜಿಲ್ಲೆಗಳಿಂದ ಒಟ್ಟು 39,372 ಫಲಾನುಭವಿಗಳ ಆಯ್ಕೆ ಗುರಿ ನಿಗಡಿಪಡಿಸಲಾಗಿದೆ. ಇದರಲ್ಲಿ ಕಲಬುರಗಿ– 7,419, ಬಳ್ಳಾರಿ–3,030, ಬೀದರ್‌– 5,329, ಕೊಪ್ಪಳ– 4,409, ರಾಯಚೂರು– 5,369, ವಿಜಯನಗರ– 3,914, ವಿಜಯಪುರ– 6,255 ಹಾಗೂ ಯಾದಗಿರಿ– 3,647 ಫಲಾನುಭವಿಗಳ ಗುರಿ ಹಾಕಿಕೊಳ್ಳಲಾಗಿತ್ತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.