ADVERTISEMENT

ತ್ರಿವಳಿ ತಲಾಖ್ ಮಸೂದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 8:55 IST
Last Updated 4 ಜನವರಿ 2018, 8:55 IST
ಕಲಬುರ್ಗಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮರ್ಕಜಿ ಸಿರತ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್ ಮಾತನಾಡಿದರು
ಕಲಬುರ್ಗಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮರ್ಕಜಿ ಸಿರತ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್ ಮಾತನಾಡಿದರು   

ಕಲಬುರ್ಗಿ: ‘ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆಯನ್ನು ಕಾನೂನಾಗಿ ರೂಪಿಸಲು ಮುಂದಾಗಿರುವುದು ಸರಿ ಯಲ್ಲ’ ಎಂದು ಮರ್ಕಜಿ ಸಿರತ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್ ಹೇಳಿದರು.

ಮರ್ಕಜಿ ಸಿರತ್ ಸಮಿತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ತರಾತುರಿ ಮಾಡಿ ಒಂದೇ ದಿನದಲ್ಲಿ ಈ ಮಸೂದೆ ಮಂಡಿಸಿದೆ. ಮಸೂದೆಯಲ್ಲಿ ಸಾಕಷ್ಟು ತಪ್ಪು ಅಂಶಗಳಿವೆ. ತಲಾಖ್‌ನಿಂದ ಪತಿಗೆ 3 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ. ಜೈಲಿನಲ್ಲಿರುವ ವ್ಯಕ್ತಿ ತಮ್ಮ ಕುಟುಂಬಕ್ಕೆ ಯಾವ ರೀತಿ ರಕ್ಷಣೆ ನೀಡಬೇಕು ಮತ್ತು ಜೈಲಿನಿಂದ ಹೊರಬಂದು ಹೇಗೆ ಜೀವನ ನಡೆಸಬೇಕು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ’ ಎಂದರು.

ADVERTISEMENT

ತನ್ವೀರ್ ಅಶ್ರಫಿ, ಗೌಸುದ್ದೀನ್, ಶಫೀಕ್ ಅಹ್ಮದ್, ಅಜೀಜುಲ್ಲಾ ಸರಮಸ್ತ, ಅಬ್ದುಲ್ ಖದೀರ್, ನಜಮುಲ್ ಇಸ್ಲಾಂ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.