ADVERTISEMENT

ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 16:09 IST
Last Updated 31 ಆಗಸ್ಟ್ 2023, 16:09 IST
ಸಹನಾ ಮೃತ್ತಪಟ್ಟ ಮಗು
ಸಹನಾ ಮೃತ್ತಪಟ್ಟ ಮಗು   

ಯಡ್ರಾಮಿ: ಪಟ್ಟಣದ ನಾಗಲಿಂಗೇಶ್ವರ ಕಾಲೊನಿಯಲ್ಲಿ 16 ವರ್ಷದ ಬಾಲಕಿ ಮನೆಯಲ್ಲಿ ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಬಸವರಾಜ ಹೂಗಾರ ಅವರ ಪುತ್ರಿ ಸಹನಾ ಮೃತಪಟ್ಟ ಬಾಲಕಿ. ಬಸವರಾಜ ತನ್ನ ಪತ್ನಿ ಮತ್ತು ಇನ್ನಿಬ್ಬರು ಮಕ್ಕಳೊಂದಿಗೆ ಎಂದಿನಂತೆ ತಮ್ಮ ಹೋಟೆಲಿಗೆ ತೆರಳಿದ್ದಾರೆ. ಬಳಿಕ ಬಾಲಕಿಯ ಸಹೋದರ ಸ್ನಾನ ಮಾಡಲು ಮನೆಗೆ ತೆರಳಿದ್ದಾನೆ. ಮನೆಯಲ್ಲಿ ಒಬ್ಬಳೇ ಇದ್ದ ಅಕ್ಕನ ಕುತ್ತಿಗೆಗೆ ಹಗ್ಗ ಬಿಗಿಯಾಗಿದ್ದನ್ನು ನೋಡಿ ಕಿರುಚಾಡಿ ಜನರಿಗೆ ಕರೆದಿದ್ದಾನೆ.

ಬಾಲಕಿ ಜೋಕಾಲಿ ಮೇಲೆ ಕುಳಿತು ಸುರುಳಿ ಹೊಡೆದು ಆಡುವ ವೇಳೆ ಹಗ್ಗ ಕುತ್ತಿಗೆಗೆ ಬಿದ್ದಿದೆ. ಅದನ್ನು ಬಿಡಿಸಿಕೊಳ್ಳಲು ಆಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.