ಕಲಬುರಗಿ: ಅಫಜಲಪುರ ತಾಲ್ಲೂಕಿನ ಅಮರ್ಜಾ ನದಿ ಬಲದಂಡೆ ಮೇಲಿರುವ ಕಾರಭೋಸಗಾ ಗ್ರಾಮದ ಕಾಡಸಿದ್ದೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ ಹಾಗೂ ಕಾಶಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಇದೇ 27, 28ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
27ರಂದು ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯರ ಅಮೃತ ಹಸ್ತದಿಂದ ಕಾಡಸಿದ್ದೇಶ್ವರ ಬೆಳ್ಳಿಮೂರ್ತಿ ತುಲಾಭಾರ ನಡೆಯಲಿದೆ. ಸಂಜೆ 7.15ಕ್ಕೆ ಬಡದಾಳ ತೇರಿನಮಠದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಾಡಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ.
28ರಂದು ಬೆಳಿಗ್ಗೆ 9ಕ್ಕೆ ಮಹಿಳೆಯರ ಕುಂಭ–ಕಳಶ ಮುತ್ತಿನ ಆರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗುವುದು. ಕಾಶಿ ಪೀಠದ ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಮತ್ತು ಬಡದಾಳ ತೇರಿನ ಮಠದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಚಕ್ಕಡಿ ಗಾಡಿಗಳ ಸ್ಪರ್ಧೆ ಮತ್ತು ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯಲಿದ್ದು, ಗೆದ್ದವರಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.