ಅಫಜಲಪುರ: ತಾಲೂಕಿನ ಬಳ್ಳೂರ್ಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 150–ಇ ಅಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಲು ಸುಮಾರು 2 ಕಿ.ಮೀ ಬೈಪಾಸ್ ರಸ್ತೆಯೂ ನಿರ್ಮಾಣ ಹಂತದಲ್ಲೇ ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗಲಿದೆ.
ಕಲಬುರಗಿ ದಿಂದ ಸೋಲಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 150–ಇ ನಿರ್ಮಾಣ ಮಾಡಲಾಗಿದೆ. ಬಳ್ಳೂರ್ಗಿ, ಅಫಜಲಪುರ, ಚೌಡಾಪುರ ಗ್ರಾಮಗಳ ಹತ್ತಿರ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ‘ಈಗಾಗಲೇ ಬಳ್ಳೂರ್ಗಿ ಗ್ರಾಮದ ಹತ್ತಿರದ ಬೈಪಾಸ್ ರಸ್ತೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಇನ್ನೂ ಕೆಲವು ಕಡೆ ಸಿಗ್ನಲ್ ಕೆಲಸ ಆಗಬೇಕಾಗಿದೆ. ಆದರೆ ರಸ್ತೆ ಮಾತ್ರ ಅಲ್ಲಲ್ಲಿ ಹಾಳಾಗಿ ಹೋಗುತ್ತಿದೆ. ಆರು ತಿಂಗಳಲ್ಲಿ ಸಂಪೂರ್ಣ ರಸ್ತೆ ಹಾಳಾಗಿ ಹೋಗುತ್ತದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.
‘ಈ ಕುರಿತು ಗುತ್ತಿದಾರರನ್ನು ವಿಚಾರಿಸಿದಾಗ ಇನ್ನೂ ಐದು ವರ್ಷ ನಾವೇ ರಸ್ತೆಯನ್ನು ನಿರ್ವಹಣೆ ಮಾಡುತ್ತೇವೆ. ಅದರ ಕಾಳಜಿ ನಿಮಗೆ ಏಕೆ ಪ್ರಶ್ನಿಸುತ್ತಾರೆ’ ಎಂದು ಜೈ ಕರವೇ ರಕ್ಷಣಾ ವೇದಿಕೆಯ ಮುಖಂಡ ಸದ್ದಾಮ್ ನಾಕೇದಾರ ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ರಸ್ತೆ ಗುಣಮಟ್ಟದಿಂದ ನಿರ್ಮಿಸಿದರೆ, ದುರಸ್ತಿ ಮಾಡುವ ಪ್ರಮಯವೇ ಬರುವುದಿಲ್ಲ. 5 ವರ್ಷ ಕಳೆದ ಮೇಲೆ ಮತ್ತೆ ರಸ್ತೆ ಹಾಳಾಗಿ ಹೋಗುತ್ತದೆ ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು ಸ್ಥಳಕ್ಕೆ ಬಂದು ರಸ್ತೆ ಪರಿಶೀಲಸಿ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು ಮತ್ತು ಅವರ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಅವರು ಹೇಳಿದರು.
‘150 ಈ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡು ಮೂರು ಕಡೆ ಬೈಪಾಸ್ ರಸ್ತೆ ಮಾಡಲು ಸುಮಾರು ₹100 ಕೋಟಿ ಟೆಂಡರ್ ಕರೆಯಲಾಗಿದ್ದು ಆದರೆ ಗುತ್ತಿಗೆದಾರರು ಶೇ 30ರಷ್ಟು ಕಡಿಮೆಗೆ ಕಾಮಗಾರಿ ಪಡೆದಿದ್ದರಿಂದ ರಸ್ತೆ ಕಾಮಗಾರಿ ಕಳಪೆ ಆಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಹೆಚ್ಚಿನ ಭಾರವ ಹೊತ್ತು ವಾಹನಗಳು ಸಂಚಾರ ಮಾಡುತ್ತಿವೆ ಮತ್ತು ಇದೇ ರಸ್ತೆಯಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳು ಇರುವುದರಿಂದ ಹೆಚ್ಚಿನ ವಾಹನಗಳು ಸಂಚಾರ ಮಾಡುತ್ತವೆ. ಹೀಗಾಗಿ ರಸ್ತೆ ಮತ್ತಷ್ಟು ಹಾಳಾಗುವ ಸಂಭವ ಇದೆ. ಅದಕ್ಕಾಗಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಈಗಲೇ ರಸ್ತೆ ದುರಸ್ತಿ ಗುಣಮಟ್ಟದಿಂದ ಮಾಡಬೇಕು. ಈ ರಸ್ತೆಯಲ್ಲಿ ಅಪಾಘಾತಗಳು ಹೆಚ್ಚುತ್ತಿರುವುದರಿಂದ ಅಲ್ಲಲ್ಲಿ ರಸ್ತೆಯ ಸಿಗ್ನಲ್‌ಗಳನ್ನು ಹಾಕಿಸಬೇಕು ಎಂದು ಆಗ್ರಹಿಸಿದರು.
ರಸ್ತೆ ನಿರ್ಮಾಣ ಕಂಪನಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇಮಾಮ್ ಇಬ್ರಾಹಿಂ ಮಾಹಿತಿ ನೀಡಿ ನಿರಂತರವಾಗಿ ಮಳೆಯಾಗಿದ್ದರಿಂದ ರಸ್ತೆ ಹಾಳಾಗಿದೆ ದುರಸ್ತಿ ಮಾಡುತ್ತೇವೆ ನಿರ್ವಹಣೆ ಜವಾಬ್ದಾರಿ ನಮಗೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.