ADVERTISEMENT

ಕಟ್ಟಿಸಂಗಾವಿ: ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು

ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು: ಡಾ. ಅಜಯ್ ಸಿಂಗ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 14:46 IST
Last Updated 19 ಮಾರ್ಚ್ 2023, 14:46 IST
ಕಟ್ಟಿ ಸಂಗಾವಿ ಗ್ರಾಮದಲ್ಲಿ ಶಾಲಾ ಕೋಣೆಗಳ ನಿರ್ಮಾಣಕ್ಕೆ ಡಾ. ಅಜಯ್ ಸಿಂಗ್ ಅಡಿಗಲ್ಲು ಹಾಕಿದರು. ಗ್ರಾಮಸ್ಥರು ಇದ್ದರು
ಕಟ್ಟಿ ಸಂಗಾವಿ ಗ್ರಾಮದಲ್ಲಿ ಶಾಲಾ ಕೋಣೆಗಳ ನಿರ್ಮಾಣಕ್ಕೆ ಡಾ. ಅಜಯ್ ಸಿಂಗ್ ಅಡಿಗಲ್ಲು ಹಾಕಿದರು. ಗ್ರಾಮಸ್ಥರು ಇದ್ದರು   

ಜೇವರ್ಗಿ: ಮತಕ್ಷೇತ್ರದಡಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಶಾಲೆ, ಕಾಲೇಜುಗಳ ಮೂಲ ಸವಲತ್ತು ಅಭಿವೃದ್ಧಿಗೆ ತಾವು ಹೆಚ್ಚಿನ ಆದ್ಯತೆ ನೀಡಿದ್ದಾಗಿ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.

ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಮೈಕ್ರೊ ಯೋಜನೆ ಅಡಿಯಲ್ಲಿ ಸುಮಾರು ₹ 1.20 ಕೋಟಿ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 12 ಕೋಣೆಗಳಿಗೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದರು.

ಜೇವರ್ಗಿ ಕ್ಷೇತ್ರದಲ್ಲಿ ಶಾಲೆಗಳಲ್ಲಿ ಕೋಣೆಗಳ ಕೊರತೆ ನೀಗಿಸಲು ಹೆಚ್ಚಿನ ಶ್ರಮ ವಹಿಸಲಾಗಿದೆ. ಪದವಿ ಕಾಲೇಜು ಕಟ್ಟಡ ನಿರ್ಮಾಣ, ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಾಣದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ತಂದೆ ದಿ. ಧರಂಸಿಂಗ್ ಅವರ ಹೆಸರಲ್ಲಿನ ಪ್ರತಿಷ್ಠಾನದ ಮೂಲಕ ಅಕ್ಷರ ಅವಿಷ್ಕಾರ ಮಿಶನ್ ಯೋಜನೆಯಲ್ಲಿ ಜೇವರ್ಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೂ ಶ್ರಮಿಸಲಾಗುತ್ತಿದೆ ಎಂದರು.

ADVERTISEMENT

ಮುಖಂಡರಾದ ರಾಜಶೇಖರ ಸೀರಿ, ನೀಲಕಂಠ ಅವಂಟಿ, ಮೊಹಮ್ಮದ್ ನೂರಿ, ರವಿ ಕೋಳಕೂರ್, ವಿಜಯ್ ಪಾಟೀಲ್ ಕಲ್ಲಹಂಗರಗಾ, ತಿಪ್ಪಣ್ಣ ನಾಡಗಿರಿ, ಬಿ.ಎಸ್. ಪಾಟೀಲ, ಮಹೇಶ್ ಛತ್ರಿ, ಬಾಬು ಮದರಿ, ನಿಂಗಪ್ಪ ಪೂಜಾರಿ, ಕಂಕಣ ತಳವಾರ, ಬೀರಪ್ಪ ಪೂಜಾರಿ, ಸಂತೋಷ್ ಮ್ಯಾಗೇರಿ, ಶರಣಪ್ಪ ಮದರಿ, ಸಾಯಬಣ್ಣ ಮಳ್ಳಿ, ಸಂತೋಷ್ ತಳವಾರ, ಗೌತಮ್ ಕಟ್ಟಿ, ಪ್ರತಾಪ್ ಕಟ್ಟಿ, ಮನೋಹರ್, ರಿಯಾಜ್ ಪಟೇಲ್, ಜಾವಿದ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.