ADVERTISEMENT

ಕೋಲಿ ಸಮಾಜ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ: ಬೇಡಿಕೆ ಈಡೇರಿಕೆಗೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 16 ಮೇ 2025, 13:41 IST
Last Updated 16 ಮೇ 2025, 13:41 IST
ಅಖಿಲ ಭಾರತೀಯ ಕೋಲಿ ಸಮಾಜ (ಪರ್ಯಾಯ ಪದಗಳ) ರಾಜ್ಯ ಸಮಿತಿ ಪದಾಧಿಕಾರಿಗಳ ಕಾರ್ಯಕಾರಿಣಿ ಸದಸ್ಯರ ಸಭೆ ಕಲಬುರಗಿಯ ಐವಾನ್‌–ಇ– ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ನಡೆಯಿತು
ಅಖಿಲ ಭಾರತೀಯ ಕೋಲಿ ಸಮಾಜ (ಪರ್ಯಾಯ ಪದಗಳ) ರಾಜ್ಯ ಸಮಿತಿ ಪದಾಧಿಕಾರಿಗಳ ಕಾರ್ಯಕಾರಿಣಿ ಸದಸ್ಯರ ಸಭೆ ಕಲಬುರಗಿಯ ಐವಾನ್‌–ಇ– ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ನಡೆಯಿತು   

ಕಲಬುರಗಿ: ಅಖಿಲ ಭಾರತೀಯ ಕೋಲಿ ಸಮಾಜ (ಪರ್ಯಾಯ ಪದಗಳ) ರಾಜ್ಯ ಸಮಿತಿ ಪದಾಧಿಕಾರಿಗಳ ಕಾರ್ಯಕಾರಿಣಿ ಸದಸ್ಯರ ಸಭೆ ನಗರದ ಐವಾನ್‌–ಇ– ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ನಡೆಯಿತು.

ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಮುದಿರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಕೋಲಿ, ಕಬ್ಬಲಿಗ, ಅಂಬಿಗ, ಸುಣಗಾರ, ಬೆಸ್ತ, ಬಾರಕೇರ ಸೇರಿದಂತೆ ಸಮಾಜದ ಇತರ ಪರ್ಯಾಯ ಪದಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಕಡತ ಕುರಿತು ರಾಜ್ಯ ಸರ್ಕಾರ ನ್ಯೂನತೆ ಸರಿಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮುಖ್ಯಮಂತ್ರಿ, ಮಂತ್ರಿಗಳಿಗೆ ಮೇಲೆ ಒತ್ತಡ ಹೇರಬೇಕು. ಹಿಂದುಳಿದ ಆಯೋಗದ ವತಿಯಿಂದ ನಡೆದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜಾತಿ ಜನಗಣತಿಯಿಂದ ಕೋಲಿ ಸಮಾಜದ ಪರ್ಯಾಯ ಪದಗಳಿಗೆ ಅನ್ಯಾಯವಾಗಿದೆ. ಈ ಸಮಾಜದ ಜನಸಂಖ್ಯೆಯನ್ನು ಅತ್ಯಂತ ಕಡಿಮೆ ನಮೂದಿಸಲಾಗಿದೆ. ಈ ಜಾತಿಗಳ ಒಟ್ಟು ಜನಸಂಖ್ಯೆ 32 ಲಕ್ಷ ದಾಟುತ್ತದೆ. ಆದರೆ, ರಾಜ್ಯದಲ್ಲಿ ಈ ಸಮುದಾಯದ ಜನಸಂಖ್ಯೆ 14.5 ಲಕ್ಷ ಮಾತ್ರ ಎಂದು ನಮೂದಾಗಿದೆ. ಇದನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಟಿ.ಡಿ.ರಾಜ್ ಕಾರ್ಯಕ್ರಮ ನಿರೂಪಿಸಿದರು. ಶಂಕರ ಕಟ್ಟಿ ಸಂಗಾವಿ ವಂದಿಸಿದರು. ಸಭೆಯಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗುಬಾಯಿ ಬುಳ್ಳಾ, ರಾಷ್ಟ್ರೀಯ ಪರಿಷತ್ ಸದಸ್ಯ ಶಿವಲಿಂಗಪ್ಪ ಕಿನ್ನೂರ, ಜಿಲ್ಲಾ ಅಧ್ಯಕ್ಷ ದತ್ತಾತ್ರೇಯ ದೇವರನಾವದಗಿ, ಉಪಾಧ್ಯಕ್ಷ ಮಲ್ಲಪ್ಪ ಬಾಗಲಕೋಟ್, ಖಜಾಂಚಿ ಮಡಿವಾಳಪ್ಪ ನರಿಬೋಳ, ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ, ಯುವ ಮುಖಂಡರಾದ ದೇವಿಂದ್ರ ಚಿಗರಳ್ಳಿ, ಅನಿತಾ ಕೊರಬಾ, ಲಕ್ಷ್ಮಣರೆಡ್ಡಿ ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.