ADVERTISEMENT

ಆಳಂದ ಪಿಎಲ್‌ಡಿ ಬ್ಯಾಂಕ್‌ಗೆ 9 ಸದಸ್ಯರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:12 IST
Last Updated 11 ಫೆಬ್ರುವರಿ 2025, 16:12 IST
ಆಳಂದ ಪಿಎಲ್‌ಡಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಚುನಾವಣಾಧಿಕಾರಿ ಶಂಕ್ರೆಪ್ಪ ಪಾಟೀಲ ಪ್ರಮಾಣ ಪತ್ರ ವಿತರಿಸಿದರು. ಗುರುಲಿಂಗಜಂಗಮ ಪಾಟೀಲ, ಚನ್ನಬಸಪ್ಪ ಪಾಟೀಲ, ಸಂಜಯಕುಮಾರ ಖೋಬ್ರೆ ಇದ್ದರು
ಆಳಂದ ಪಿಎಲ್‌ಡಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಚುನಾವಣಾಧಿಕಾರಿ ಶಂಕ್ರೆಪ್ಪ ಪಾಟೀಲ ಪ್ರಮಾಣ ಪತ್ರ ವಿತರಿಸಿದರು. ಗುರುಲಿಂಗಜಂಗಮ ಪಾಟೀಲ, ಚನ್ನಬಸಪ್ಪ ಪಾಟೀಲ, ಸಂಜಯಕುಮಾರ ಖೋಬ್ರೆ ಇದ್ದರು   

ಆಳಂದ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ ನೂತನ ಸದಸ್ಯರ ಚುನಾವಣೆಯಲ್ಲಿ 9 ಜನ ಸದಸ್ಯರು ವಿವಿಧ ಕ್ಷೇತ್ರಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಅಭಿವೃದ್ದಿ ಅಧಿಕಾರಿ ಶಂಕ್ರೆಪ್ಪ ಪಾಟೀಲ ತಿಳಿಸಿದರು.

ಸಾಲಗಾರರ ಸಾಮಾನ್ಯ ಚಿಂಚನಸೂರ ಮತ ಕ್ಷೇತ್ರಕ್ಕೆ ಶ್ರೀಶೈಲ್ ಸಿದ್ರಾಮಪ್ಪ ಮೈಸಲಗಿ, ನರೋಣಾ ಮತ ಕ್ಷೇತ್ರಕ್ಕೆ ರಮಾಕಾಂತ ದತ್ತಾತ್ರೇಯ ಪಾಟೀಲ, ಮಾದನಹಿಪ್ಪರಗಿ ಮತಕ್ಷೇತ್ರಕ್ಕೆ ಚಂದ್ರಕಾಂತ (ಈರಣ್ಣಾ) ಅಡಿವೆಪ್ಪ ಹತ್ತರಕಿ, ವಿ.ಕೆ.ಸಲಗರ ಮತಕ್ಷೇತ್ರಕ್ಕೆ ರಮೇಶ ಗುಂಡಪ್ಪ ಗುಗ್ಗಳೆ, ಸರಸಂಬಾ ಮತಕ್ಷೇತ್ರಕ್ಕೆ ಶಿವಶರಣಪ್ಪ ಹಣಮಂತ ಮುರುಮ, ಸಾಲಗಾರರ ಹಿಂದುಳಿದ ವರ್ಗ ಅ ಕ್ಷೇತ್ರ ಹೊದಲೂರ ಮತಕ್ಷೇತ್ರ ಮಹಮ್ಮದ ರಫಿ ಶಹಾಬುದ್ದೀನ್, ಸಾಲಗಾರರ ಹಿಂದುಳಿದ ವರ್ಗ(ಬ) ನಿಂಬರ್ಗಾ ಮತಕ್ಷೇತ್ರಕ್ಕೆ ಬಾಬುರಾವ ಶಿವಶರಣಪ್ಪ ಗೊಬ್ಬೂರ, ಸಾಲಗಾರರ ಮಹಿಳಾ ಮೀಸಲು ಕಡಗಂಚಿ ಮತಕ್ಷೇತ್ರ ವಿದ್ಯಾವತಿ ಚನ್ನಬಸಪ್ಪ ಪಾಟೀಲ, ಖಜೂರಿ ಮತಕ್ಷೇತ್ರದಿಂದ ಪಾರ್ವತಿಬಾಯಿ ಕಲ್ಯಾಣಪ್ಪ ಹರಿಹರ ಇವರುಗಳು ಆಯ್ಕೆಯಾಗಿದ್ದಾರೆ.

ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜಂಗಮ ಎಸ್. ಪಾಟೀಲ ಧಂಗಾಪೂರ, ನಿರ್ದೇಶಕ ಚನ್ನಬಸಪ್ಪ ಪಾಟೀಲ ದಣ್ಣೂರ, ಮುಖಂಡ ಸಂಜಯಕುಮಾರ ಖೋಬ್ರೆ, ಗುರುಶಂತ ಕಡಕೋಳ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.