ADVERTISEMENT

ಹೊನ್ನಳ್ಳಿ ಯಲ್ಲಮ್ಮದೇವಿ ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:12 IST
Last Updated 11 ಫೆಬ್ರುವರಿ 2025, 16:12 IST
ಆಳಂದ ಪಟ್ಟಣದಿಂದ ಹೊನ್ನಳ್ಳಿ ಗ್ರಾಮಕ್ಕೆ ಯಲ್ಲಮ್ಮದೇವಿ ಜಾತ್ರೆಯ ಪಲ್ಲಕ್ಕಿಯ ಮೆರವಣಿಗೆ ಸಾಗಿತು.
ಆಳಂದ ಪಟ್ಟಣದಿಂದ ಹೊನ್ನಳ್ಳಿ ಗ್ರಾಮಕ್ಕೆ ಯಲ್ಲಮ್ಮದೇವಿ ಜಾತ್ರೆಯ ಪಲ್ಲಕ್ಕಿಯ ಮೆರವಣಿಗೆ ಸಾಗಿತು.   

ಆಳಂದ: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದೇವತೆ ಯಲ್ಲಮ್ಮದೇವಿಯ ಜಾತ್ರೆಗೆ ಮಂಗಳವಾರ ಆಳಂದ ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್‌ ಅಣ್ಣರಾವ ಪಾಟೀಲ ಅವರು ಪಲ್ಲಕ್ಕಿ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಪಟ್ಟಣದ ಸಮೀಪದಲ್ಲಿರುವ ಹೊನ್ನಳ್ಳಿ ಗ್ರಾಮದೇವತೆ ಯಲ್ಲಮ್ಮದೇವಿಯ ಭಕ್ತರು ಆಳಂದ ಪಟ್ಟಣದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಪಟ್ಟಣದ ವಿವಿಧ ಬಡಾವಣೆಗಳ ಮೂಲಕ ಪಲ್ಲಕ್ಕಿ ಮೆರವಣಿಗೆ ಸಾಗಿತು. ಪಟ್ಟಣದಿಂದ 4ಕಿ.ಮೀ ದೂರದಲ್ಲಿರುವ ಹೊನ್ನಳ್ಳಿ ಗ್ರಾಮಕ್ಕೆ ರಾತ್ರಿ 9 ಗಂಟೆಗೆ ತಲುಪಿದ ಪಲ್ಲಕ್ಕಿ ಮೆರವಣಿಗೆಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸ್ವಾಗತ ಕೋರಿದರು.

ಮೆರವಣಿಗೆ ಮಾರ್ಗದಲ್ಲಿ ಚೌಡಕಿ ಕುಣಿತ, ಬಾಜಾಭಜಂತ್ರಿಗಳ ಸಡಗರ ಕಂಡುಬಂತು. ಯಲ್ಲಮ್ಮದೇವಿಯ ಮಂದಿರಕ್ಕೆ ಪಲ್ಲಕ್ಕಿ ತಲುಪಿದ ನಂತರ ರಾತ್ರಿವೀಡಿ ಭಜನೆ, ಜಾಗರಣೆ  ಜರುಗಿತು.

ADVERTISEMENT

ಬುಧವಾರ ಗ್ರಾಮದ ಮುಖ್ಯಬೀದಿಗಳಲ್ಲಿ ಯಲ್ಲಮ್ಮದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯು ಜರುಗಲಿದೆ. ನೆರೆಯ ಸೋಲಾಪುರ, ಉಮರ್ಗಾ ಸೇರಿದಂತೆ ಕಲಬುರಗಿ ಜಿಲ್ಲೆಯ ವಿವಿಧೆಡೆಯಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.