ADVERTISEMENT

ಸೇಡಂ: 11 ಕೃತಿಗಳಿಗೆ ‘ಅಮ್ಮ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:59 IST
Last Updated 14 ನವೆಂಬರ್ 2025, 5:59 IST
ಆನಂದ ಕುಂಚನೂರ
ಆನಂದ ಕುಂಚನೂರ   

ಸೇಡಂ: ‘ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 11 ಕೃತಿಗಳ-ಲೇಖಕರು ಆಯ್ಕೆಯಾಗಿದ್ದಾರೆ’ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅರುಣ ನರೇಂದ್ರ

ಕಾವ್ಯ ವಿಭಾಗದಲ್ಲಿ ಗೀತಾ ವಸಂತ (ಪ್ರಾಣಪಕ್ಷಿಯ ರೆಕ್ಕೆ) ಹಾಗೂ ಸದಾಶಿವ ಸೊರಟೂರು (ದೇವರನ್ನು ಹೊರ ಹಾಕುತ್ತೇನೆ), ಕಥಾ ವಿಭಾಗದಲ್ಲಿ ವಿಜಯಶ್ರೀ ಹಾಲಾಡಿ (ಉಮ್ಮಲ್ತಿ ಗುಡಿಯ ಸಾಕ್ಷಿ) ಹಾಗೂ ಆನಂದ ಕುಂಚನೂರು (ನಿರೂಪ), ಕಾದಂಬರಿ ವಿಭಾಗದಲ್ಲಿ ಸುನಂದಾ ಕಡಮೆ (ಹೈವೇ 63) ಹಾಗೂ ಮುದಿರಾಜ ಬಾಣದ (ಸಿಕ್ಕು), ಸಂಕೀರ್ಣ ವಿಭಾಗದಲ್ಲಿ ಬಿ.ಸುರೇಶ (ಅಡುಗೆ ಮನೆಯಲ್ಲೊಂದು ಹುಲಿ) ಹಾಗೂ ಚಂದ್ರಶೇಖರ ಮದಭಾವಿ (ಮುರಿದ ಕಡಲು), ಪ್ರಬಂಧ ವಿಭಾಗದಲ್ಲಿ ಡಾ.ಬಸವರಾಜ ಸಾದರ (ಮೂವತ್ತು ಕ್ರಾಂತಿಕಾರಿ ವಚನಗಳು) ಹಾಗೂ ಸದಾನಂದ ಪಾಟೀಲ (ಕೊರೋನಾದ ಕಣ್ಣೀರಿನ ಕಥೆಗಳು), ಹಾಗೂ ಇದೇ ವರ್ಷದಿಂದ ಮಕ್ಕಳ ವಿಭಾಗದಲ್ಲಿ `ಬಹುರೂಪಿ’ ಪ್ರಾಯೋಜಿತ ಅರುಣಾ ನರೇಂದ್ರ (ಕಮಲಿಯ ಕುರಿಮರಿ) ಕೃತಿಗಳನ್ನು 25ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಬಿ.ಸುರೇಶ

ಪ್ರಶಸ್ತಿಯು ತಲಾ ₹5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ವರ್ಷದಿಂದ ಆರಂಭಿಸಿರುವ ಬೆಂಗಳೂರಿನ ಬಹುರೂಪಿ ಪ್ರಾಯೋಜಿತ ಮಕ್ಕಳ ವಿಭಾಗದಲ್ಲಿ ಎರಡೂವರೆ ಸಾವಿರ ನಗದು, ಪುಸ್ತಕ ಬಹುಮಾನವನ್ನು ಸಹ ಇದೇ ನ.25 ರಂದು ಸಂಜೆ 5:30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT
ಚಂದ್ರಶೇಖರ ಮದಬಾವಿ
ಡಾ.ಬಸವರಾಜ ಸಾದರ
ಗೀತಾ ವಸಂತ
ಮುದಿರಾಜ ಬಾಣದ
ಸದಾನಂದ ಪಾಟೀಲ
ಸದಾಶಿವ ಸೊರಟೂರು
ಸುನಂದಾ ಕಡಮೆ
ಅಮ್ಮ ಪ್ರಶಸ್ತಿಗೆ `ಬೆಳ್ಳಿ ಹಬ್ಬದ ಸಂಭ್ರಮ’
ಕಳೆದ 24 ವರ್ಷಗಳಿಂದ ನಿರಂತರ ಅಮ್ಮ ಪ್ರಶಸ್ತಿ ಸಾಹಿತ್ಯ ವಲಯದ ಬಹರಗಾರಿಗೆ ಕೊಡಮಾಡುತ್ತ ಬಂದಿದ್ದು ಈ ವರ್ಷ 25ನೇ ವರ್ಷಕ್ಕೆ ಕಾಲಿಟ್ಟಿದೆ. ತಾಲೂಕು ಕೇಂದ್ರವೊಂದರಿಂದ ದಿನಾಂಕ ಸ್ಥಳ ಸೇರಿದಂತೆ ಎಲ್ಲವನ್ನೂ ಬದ್ಧತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ’ಗೆ ಈಗ 25ನೇ ವರ್ಷದ ಸಂಭ್ರಮ.
ವಿಜಯಲಕ್ಷ್ಮೀ ಹಾಲಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.