ಪ್ರಾತಿನಿಧಿಕ ಚಿತ್ರ
ಕಲಬುರಗಿ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ ₹170 ರಂತೆ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.
ಆದರೆ, ಕೆಲವು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಇ-ಕೆವೈಸಿ ಹಾಗೂ ಇನ್ನಿತರೆ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮೆ ಆಗುತ್ತಿಲ್ಲ. ಅಂತಹ ಪಡಿತರ ಚೀಟಿದಾರರ ಸಮಸ್ಯೆಗಳ ನಿವಾರಣೆಗಾಗಿ ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿಗಳ ಆಹಾರ ಶಾಖೆಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಆಹಾರ ನಿರೀಕ್ಷಕರನ್ನು ಉಸ್ತುವಾರಿಗೆ ನೇಮಿಸಲಾಗಿದೆ ಎಂದು ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಜಿ.ಗುಣಕಿ ತಿಳಿಸಿದ್ದಾರೆ.
ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗದೇ ಇರುವ ಜಿಲ್ಲೆಯ ಪಡಿತರ ಚೀಟಿದಾರರು ಸಂಬಂಧಪಟ್ಟ ತಮ್ಮ ತಾಲ್ಲೂಕಿನ ಸಹಾಯವಾಣಿ ಕೇಂದ್ರಗಳ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಸಹಾಯವಾಣಿ ವಿವರ
ತಾಲ್ಲೂಕು/ಪಟ್ಟಣ; ಅಧಿಕಾರಿ ಹೆಸರು; ಮೊಬೈಲ್ ಸಂಖ್ಯೆ
ಅಫಜಲಪುರ;ಅರವಿಂದ ಅಂಗಡಿ;81477 44685
ಆಳಂದ; ಸತ್ಯನಾರಾಯಣ;98454 45998
ಚಿಂಚೋಳಿ; ವೀರೇಂದ್ರ ಓತಗಿ;81529 20051
ಚಿತ್ತಾಪುರ;ಹೀರಾಸಿಂಗ್ ಚವ್ಹಾಣ;98450 74767
ಕಲಬುರಗಿ (ನಗರ); ಭಾರತಿ ಪಾಟೀಲ;88675 76591
ಕಲಬುರಗಿ (ಗ್ರಾಮೀಣ);ಪ್ರವೀಣಕುಮಾರ ಸಾತನೂರ;97411 68538
ಜೇವರ್ಗಿ; ಸವಿತಾ;98863 23776
ಸೇಡಂ; ಮಗದುಮ್ ಹುಸೇನ್;88840 97863
ಯಡ್ರಾಮಿ;ಸುರೇಖಾ;91087 04065
ಕಮಲಾಪುರ; ಸಂತೋಷ ಮೈಲಾರಿ;98806 97441
ಕಾಳಗಿ;ರೇವಣಸಿದ್ದಯ್ಯ ಸ್ವಾಮಿ;94492 66885
ಶಹಾಬಾದ(ಪಟ್ಟಣ); ಯಲ್ಲಾಲಿಂಗ;95350 35253
ಶಹಾಬಾದ(ಗ್ರಾಮೀಣ);ಶ್ರೀಕಾಂತ; 99865 46599
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.