ADVERTISEMENT

ಕಲಬುರಗಿ: ಮೂಲಸೌಕರ್ಯ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:51 IST
Last Updated 26 ಮೇ 2025, 15:51 IST
ಕಲಬುರಗಿಯಲ್ಲಿ ಸೋಮವಾರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಕರುನಾಡ ವಿಜಯಸೇನೆಯ ಮುಖಂಡರು ಮನವಿ ಸಲ್ಲಿಸಿದರು
ಕಲಬುರಗಿಯಲ್ಲಿ ಸೋಮವಾರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಕರುನಾಡ ವಿಜಯಸೇನೆಯ ಮುಖಂಡರು ಮನವಿ ಸಲ್ಲಿಸಿದರು   

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 54ರ ತಾರಫೈಲ್ ಬಡಾವಣೆಯ ಗುಡ್ ಶೆಫರ್ಡ್ ಮೆಥೋಡಿಸ್ಟ್ ಚರ್ಚ್‌ ಪ್ರದೇಶಕ್ಕೆ ಮೂಲಸೌಕರ್ಯಗಳು ಕಲ್ಪಿಸುವಂತೆ ಕರುನಾಡ ವಿಜಯಸೇನೆಯ ಮುಖಂಡರು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಬಡಾವಣೆಯಲ್ಲಿ ಸಮರ್ಪಕ ರಸ್ತೆ ಹಾಗೂ ಒಳಚರಂಡಿ ಇಲ್ಲದೆ ಸ್ಥಳೀಯರಿಗೆ ತೊಂದರೆಯಾಗಿದೆ. ಸಾರ್ವಜನಿಕರ ಓಡಾಟದ ಅನುಕೂಲಕ್ಕಾಗಿ ಸಿ.ಸಿ. ರಸ್ತೆ, ಒಳಚರಂಡಿ ಕಾಮಗಾರಿಗಳನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ಪಾಲಿಕೆಯ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು. 

ಸಂಘಟನೆಯ ಅಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ, ಗೌರವಾಧ್ಯಕ್ಷ ಉಸ್ಮಾನ್‌ ಸಾಬ್ ನೆಲೋಗಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಶಂಕರಗೌಡ, ನಗರಾಧ್ಯಕ್ಷ ರಾಜು ಎಚ್. ಗುಂಟ್ರಾಳ, ತಾಲ್ಲೂಕು ಅಧ್ಯಕ್ಷರಾದ ಕಲ್ಯಾಣಿ ಎಸ್.ತಳವಾರ, ಪವನ್, ಸೈಬಣ್ಣ ಪರಶುರಾಮನಹಳ್ಳಿ, ದೇವರಾಜ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.