ADVERTISEMENT

ವಿಭಾಗಮಟ್ಟದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:41 IST
Last Updated 28 ನವೆಂಬರ್ 2019, 14:41 IST
ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳೊಂದಿಗೆ ಇಲಾಖೆಯ ಕಲಬುರ್ಗಿ ವಿಭಾಗದ ಆಯುಕ್ತ ನಲಿನ್‌ ಅತುಲ್‌, ನಿರ್ದೇಶಕ ನಾರಾಯಣ ಗೌಡ ಇದ್ದರು
ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳೊಂದಿಗೆ ಇಲಾಖೆಯ ಕಲಬುರ್ಗಿ ವಿಭಾಗದ ಆಯುಕ್ತ ನಲಿನ್‌ ಅತುಲ್‌, ನಿರ್ದೇಶಕ ನಾರಾಯಣ ಗೌಡ ಇದ್ದರು   

ಕಲಬುರ್ಗಿ: ಶಿಕ್ಷಕರು ಹಾಗೂ ಮಕ್ಕಳಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಲು ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಲಿನ್ ಅತುಲ್ ತಿಳಿಸಿದರು.

ಗುರುವಾರ ನಗರದಲ್ಲಿ ಏರ್ಪಡಿಸಿದ್ದ 2019–20ನೇ ಸಾಲಿನ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಹಾಗೂ ಮಕ್ಕಳ ಕಲಬುರ್ಗಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಕಲೆಗೆ ಭಾಷೆ, ಪ್ರಾಂತದ ಕಡಿವಾಣವಿಲ್ಲ. ನಾವಿಂದು ಸಾಂಪ್ರದಾಯಿಕ ಹಂತದಲ್ಲಿದ್ದರೂ ಕಾಲಕ್ರಮೇಣ ವೈಜ್ಞಾನಿಕ ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ಚಿತ್ರಗಳನ್ನು ಕಾಗದದಲ್ಲಿ ಚಿತ್ರಿಸುವುದಕ್ಕಿಂತ ಕ್ಯಾನ್‍ವಾಸ್ ಮೇಲೆ ಚಿತ್ರಿಸಲು ಮುಂದಿನ ದಿನಮಾನಗಳಲ್ಲಿ ಚಿತ್ರಕಲಾ ಶಿಕ್ಷಕರಿಗೆ ಅವಕಾಶ ಕಲ್ಪಿಸಿ ಕೊಡಲಾಗುವುದು. ಆ ಕಲಾಕೃತಿಗಳನ್ನು ಶಿಕ್ಷಣ ಇಲಾಖೆಯ ಇತರೆ ಕಚೇರಿಗಳಿಗೆ ಉಚಿತವಾಗಿ ನೀಡಲಾಗುವುದು. ಎನಿಮೇಷನ್ ಮೂಲಕ ದೃಶ್ಯ ಕಲೆ ತನ್ನ ಪ್ರಭಾವವನ್ನು ಮೀರಿ ವಿಸ್ತಾರವನ್ನು ಕಂಡುಕೊಂಡಿದೆ’ ಎಂದರು.

ADVERTISEMENT

ಇಲಾಖೆಯ ಆಯುಕ್ತರ ಕಚೇರಿಯ ನಿರ್ದೇಶಕ ಟಿ. ನಾರಾಯಣಗೌಡ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮುಧೋಳ, ನೋಡಲ್ ಅಧಿಕಾರಿಗಳು ಹಾಗೂ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ದೇವೀಂದ್ರಪ್ಪ ಉಪಸ್ಥಿತರಿದ್ದರು.

ನಾಗೇಂದ್ರಪ್ಪ ಔರಾದ ಕಾರ್ಯಕ್ರಮ ನಿರೂಪಿಸಿದರು. ಚಿತ್ರಕಲಾ ಶಿಕ್ಷಕಿ ದೀಪಾ ಪ್ರಾರ್ಥಿಸಿದರು. ಹಣಮಂತ ಮಂತಟ್ಟಿ ಹಾಗೂ ಮಲ್ಲಿಕಾರ್ಜುನ ಬಿರಾಳ ಚಿತ್ರಕಲಾ ಸ್ಪರ್ಧೆ ನಿರ್ಣಾಯಕರಾಗಿ ಭಾಗವಹಿಸಿದ್ದರು.

ಕಲಬುರ್ಗಿ ವಿಭಾಗ ಮಟ್ಟದ ಸ್ಪರ್ಧೆಗೆ 8, 9, ಹಾಗೂ 10ನೇ ತರಗತಿಗಳ ಒಟ್ಟು 54 ವಿದ್ಯಾರ್ಥಿಗಳು ಹಾಗೂ ಪ್ರತಿ ಜಿಲ್ಲೆಗೆ ಎರಡು ಚಿತ್ರಕಲಾ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ವಿಭಾಗ ಮಟ್ಟದಲ್ಲಿ ವಿಜೇತರಾದ 8,9, ಹಾಗೂ 10ನೇ ತರಗತಿಗಳಿಂದ ತಲಾ 6 ವಿದ್ಯಾರ್ಥಿಗಳಂತೆ ಒಟ್ಟು 18 ವಿದ್ಯಾರ್ಥಿಗಳು ಪ್ರತಿ ಜಿಲ್ಲೆಯಿಂದ 1 ಚಿತ್ರಕಲಾ ಶಿಕ್ಷಕರು ಸೇರಿದಂತೆ ಒಟ್ಟು 6 ಚಿತ್ರಕಲಾ ಶಿಕ್ಷಕರನ್ನು ರಾಜಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ರಾಜ್ಯಮಟ್ಟಕ್ಕೆ 8ನೇ ತರಗತಿ ವಿದ್ಯಾರ್ಥಿಗಳಾದ ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಚಿಟಗುಪ್ಪಾದ ಲಲಿತಾ ಮಚ್ಚೇಂದ್ರ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಳ್ಳಿಯ ಜಿ. ರಕ್ಷಿತಾ, ರಾಯಚೂರ ಜಿಲ್ಲೆ ಮಾನವಿಯ ಗಂಗಾಧರ ಚೆನ್ನಬಸವ, ಬಳ್ಳಾರಿ ಜಿಲ್ಲೆಯ ಹರಪನಳ್ಳಿ ತಾಲ್ಲೂಕಿನ ಹರಕನಾಳದ ಎಂ. ಪ್ರಿಯಾಂಕ್, ರಾಯಚೂರ ಜಿಲ್ಲೆ ಲಿಂಗಸಗೂರಿನ ರೇಣುಕಾ ಎ. ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿಯ ಢಣಾಪುರದ ಎಂ. ರಫಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

9ನೇ ತರಗತಿ ವಿದ್ಯಾರ್ಥಿಗಳಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಢಣಾಪುರದ ತಾಜೋದ್ದೀನ್ ಹುಸೇನಸಾಬ್, ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಲ್ಲಹಳ್ಳಿಯ ಎಚ್.ಬಸವರಾಜ, ಬಳ್ಳಾರಿಯ ಹೊಸನೆಲ್ಲುಡಿಯ ಎಂ. ಚಂದ್ರಕಲಾ ನಾಗಯ್ಯಸ್ವಾಮಿ, ಕಲಬುರ್ಗಿಯ ಚಾಂದ ಸುಲ್ತಾನ ಮೊಹ್ಮದ ಶಬ್ಬೀರ್, ಕಲಬುರ್ಗಿಯ ಶ್ರುತಿ ಅಶೋಕ ಹಾಗೂ ರಾಯಚೂರ ಜಿಲ್ಲೆಯ ಲಿಂಗಸಗೂರಿನ ಶ್ರೀದೇವಿ ಹಣಮಂತ ಆಯ್ಕೆಯಾದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಕಲಬುರ್ಗಿಯ ಲಕ್ಷ್ಮಿ ವೀರಣ್ಣ, ಕೊಪ್ಪಳದ ಗಂಗಾವತಿಯ ಸುಮಿತ್ರಾ ವಿರೂಪಾಕ್ಷಪ್ಪಾ ಬಂಡಿ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಗಾಣದಾಳದ ಮರಿಯಪ್ಪ ಹನುಮಂತಪ್ಪ, ರಾಯಚೂರ ಜಿಲ್ಲೆ ಸಿಂಧನೂರಿನ ಸುಮಿತ್ರಾ ಈರಣ್ಣ, ಕಲಬುರರ್ಗಿಯ ಪೂರ್ಣಿಮಾ ಹಾಗೂ ಬಳ್ಳಾರಿ ಹಗರಿಮೊಮ್ಮನಳ್ಳಿಯ ದಸ್ಮಾಪುರದ ಬಿ. ಲಿಂಗರಾಜು ಆಯ್ಕೆಯಾಗಿದ್ದಾರೆ.

ಚಿತ್ರಕಲಾ ಶಿಕ್ಷಕರಾದ ಬೀದರ್ ಜಿಲ್ಲೆ ಬಸವಕಲ್ಯಾಣದ ಘೋಟಾಳದ ಭೀಮರಾಯ ಎಸ್. ಮಲ್ಲಹಾರ, ಕಲಬುರ್ಗಿಯ ಮಲ್ಲಿಕಾರ್ಜುನ ಕೊರಳಿ, ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಜೋಗುಂಡಬಾವಿಯ ಗುಂಡಪ್ಪ ಕುರಿ, ರಾಯಚೂರಿನ ಜಗಲವಾಡದ ಪ್ರಭಾಕರ ಮಂಕಾಲ್, ಕೊಪ್ಪಳ ಜಿಲ್ಲೆಯ ಗಂಗಾವತಿಯ ಹನುಮೇಶ ಹಾಗೂ ಬಳ್ಳಾರಿಯ ಯು. ರಮೇಶ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.