ADVERTISEMENT

‘ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ ಅವ್ವ’

ಗೋದುತಾಯಿ ಕಾಲೇಜಿನಲ್ಲಿ ಡಾ.ದಾಕ್ಷಾಯಿಣಿ ಅವ್ವ ಅವರ ಜನ್ಮದಿನ, ಬಡವರಿಗೆ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 16:09 IST
Last Updated 22 ನವೆಂಬರ್ 2020, 16:09 IST
ಕಲಬುರ್ಗಿಯ ಗೋದುತಾಯಿ ಕಾಲೇಜಿನಲ್ಲಿ ಭಾನುವಾರ ಆಯೋಜಸಿದ್ದ ಡಾ.ದಾಕ್ಷಾಯಿಣಿ ಅವ್ವ ಅವರ ಜನ್ಮದಿನದ ಅಂಗವಾಗಿ ಮಹಿಳೆಯರಿಗೆ ಸಾಮಗ್ರಿ ವಿತರಿಸಲಾಯಿತು
ಕಲಬುರ್ಗಿಯ ಗೋದುತಾಯಿ ಕಾಲೇಜಿನಲ್ಲಿ ಭಾನುವಾರ ಆಯೋಜಸಿದ್ದ ಡಾ.ದಾಕ್ಷಾಯಿಣಿ ಅವ್ವ ಅವರ ಜನ್ಮದಿನದ ಅಂಗವಾಗಿ ಮಹಿಳೆಯರಿಗೆ ಸಾಮಗ್ರಿ ವಿತರಿಸಲಾಯಿತು   

ಕಲಬುರ್ಗಿ: ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಮತ್ತು ನಾಲ್ಕು ಚಕ್ರ ತಂಡದ ಆಶ್ರಯದಲ್ಲಿ ಭಾನುವಾರ ಡಾ.ದಾಕ್ಷಾಯಿಣಿ ಅವ್ವ ಅವರ 51ನೇ ಜನ್ಮದಿನ ಆಚರಿಸಲಾಯಿತು.

ಇದರ ಅಂಗವಾಗಿ 200 ಜನ ಸಂತ್ರಸ್ತ, ಬಡ ಹಾಗೂ ಕಾರ್ಮಿಕ ಮಹಿಳೆಯರಿಗೆ ಸೀರೆ, ಸಿಹಿ ತಿಂಡಿಗಳು, ದಿನನಿತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು.

ಮುಖ್ಯತಿಥಿಯಾಗಿ ಪಾಲ್ಗೊಂಡಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಅವ್ವ ಅವರು ದಾಸೋಹ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಪ್ರತಿದಿನವು ದಾಸೋಹ ಮಾಡುತ್ತಿದ್ದಾರೆ. ಪೂಜ್ಯ ಶರಣಬಸವಪ್ಪ ಅಪ್ಪ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳು ಮೆಚ್ಚುವಂಥದ್ದು’ ಎಂದರು.

ADVERTISEMENT

ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ತಮ್ಮ ಮಕ್ಕಳೊಂದಿಗೆ ಜೊತೆಗೂಡಿ ಹಲವು ಜನರಿಗೆ ಪ್ರತಿದಿನವೂ ದಾಸೋಹದ ವ್ಯವಸ್ಥೆ ಮಾಡಿರುವುದು ಎಲ್ಲರಿಗೂ ಮಾದರಿ’ ಎಂದರು.

ಪ್ರಾಚಾರ್ಯರಾದ ಡಾ.ಎಂ.ಆರ್. ಹುಗ್ಗಿ, ಡಾ.ಬಸವರಾಜೇಶ್ವರಿ, ಅನ್ನಪೂರ್ಣ ರೆಡ್ಡಿ, ಅನಿತಾ, ಮಹಾವಿದ್ಯಾಲಯ ಡಾ.ಇಂದಿರಾ ಶೆಟಕಾರ, ಡಾ.ಸಿದ್ದಮ್ಮ ಗುಡೇದ, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ, ಜಾನಕಿ ಹೊಸೂರ, ಕೃಪಾಸಾಗರ ಗೊಬ್ಬುರ, ನಾಲ್ಕು ಚಕ್ರದ ಮಾಲಾ ಕಣ್ಣಿ, ಮಾಲಾ ಧನ್ನೂರ ಮತ್ತು ತಂಡದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.