ADVERTISEMENT

‘ಹಿಂದೂ ಚಿಂತನಾ ಸಭೆ 18ರಂದು: ಪ್ರವೀಣ ತೊಗಾಡಿಯಾ ಭಾಗಿ’

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:12 IST
Last Updated 14 ಜೂನ್ 2025, 16:12 IST
ಮಲ್ಲಿಕಾರ್ಜುನ ಮೋರಟಗಿ
ಮಲ್ಲಿಕಾರ್ಜುನ ಮೋರಟಗಿ   

ಕಲಬುರಗಿ: ‘ಅಂತರರಾಷ್ಟ್ರೀಯ ಹಿಂದೂ ಪರಿಷತ್‌, ರಾಷ್ಟ್ರೀಯ ಬಜರಂಗ ದಳದಿಂದ ಜೂನ್‌ 18ರಂದು ಸಂಜೆ 5ಕ್ಕೆ ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಮಂದಾರ ಪುಷ್ಪಾ ಕಲ್ಯಾಣ ಮಂಪದಲ್ಲಿ ಬೃಹತ್ ಹಿಂದೂ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಬಜರಂಗ ದಳದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮೋರಟಗಿ ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಹಿಂದೂ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕ್ರಮದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಅಪ್ಪಾರಾವ್ ದೇವಿ ಮುತ್ತ್ಯಾ, ಬಬಲಾದನ ಶಿವಮೂರ್ತಿ ಶಿವಾಚಾರ್ಯ, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯ, ಪಾಳಾದ ಗುರುಮೂರ್ತಿ ಶಿವಾಚಾರ್ಯ, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಉಪಾಧ್ಯಕ್ಷ ಲಿಂಗರಾಜ ಅಪ್ಪ ಸೇರಿದಂತೆ ಹಲವು ಸ್ವಾಮೀಜಿಗಳು, ಪ್ರಮುಖರು ಪಾಲ್ಗೊಳ್ಳುವರು’ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಚಿಂತನಾ ಸಭೆಯ ಅಧ್ಯಕ್ಷ ಶಶಿಕಾಂತ ಆರ್‌.ದೀಕ್ಷಿತ, ಮುಖಂಡರಾದ ಶರಣು ಗುತ್ತೇದಾರ, ನಾಗರಾಜ ಪಾಟೀಲ, ಗೌರಿಶ ಘಸನೆ, ಸಂದೀಪ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.