ಕಲಬುರಗಿ: ಧರ್ಮ, ಜಾತಿ, ಲಿಂಗ, ಸಮಾಜದಲ್ಲಿ ಹೆಣ್ಣಿನ ಕುಟುಂಬದ ಜವಾಬ್ದಾರಿ, ಒತ್ತಡಗಳನ್ನು ಮೀರಿದ ಹೆಣ್ಣಿನ ತಳಮಳ- ತಲ್ಲಣಗಳನ್ನು ಕಥೆಗಳ ಮೂಲಕ ಹೆಣೆದು ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತೆಯನ್ನು ಬೆಳಗಿದ ಕೀರ್ತಿ ಬಾನು ಮುಷ್ತಾಕ್ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಮತ್ತು ಶರಣಬಸವ ವಿವಿ ಕನ್ನಡ ಅಧ್ಯಯನ ಸಂಶೋಧನ ವಿಭಾಗದ ಸಹಯೋಗದಲ್ಲಿ ‘ಬುಕರ್’ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಕಥಾ ಸಾಹಿತ್ಯ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಅನೀಲಕುಮಾರ ಜಿ.ಬಿಡವೆ ಅಧ್ಯಕ್ಷತೆ ವಹಿಸಿ, ‘ಮನೆಯಲ್ಲಿ ಗಂಡು- ಹೆಣ್ಣು ಎಂದು ನೋಡುವ ದೃಷ್ಟಿ ಬದಲಾಗಬೇಕು. ಅವುಗಳಿಗೆ ಸ್ಪಂದಿಸುವ ಕಥೆ ಮುಷ್ತಾಕ್ ಅವರು ಬರೆದಿದ್ದಾರೆ. ನಮ್ಮ ವಿಶ್ವವಿದ್ಯಾಲಯಕ್ಕೆ ಭಾಷೆ ಮತ್ತು ಸಮಾಜದ ವಿಭಾಗಕ್ಕೆ ಅವರ ಕೃತಿ ತರಿಸಿ ಓದುವ ಹವ್ಯಾಸ ಬೆಳೆಸುವ ಕೆಲಸ ಮಾಡಲಾಗುವುದು’ ಎಂದರು.
ಕುಲಸಚಿವ ಪ್ರೊ. ಎಸ್.ಜಿ. ಡೊಳ್ಳೇಗೌಡರ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್, ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ಕನ್ನಡ ವಿಭಾಗದ ಮುಖ್ಯಸ್ಥೆ ಸುಮಂಗಲಾ ರೆಡ್ಡಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸುರೇಶ ಬಡಿಗೇರ, ಶಾಂತಾ ಪಸ್ತಾಪೂರ, ಸಾರಿಕಾದೇವಿ ಕಾಳಗಿ, ಶೀಲಾದೇವಿ ಬಿರಾದಾರ, ಸಿದ್ಧಪ್ಪ ಹೊಸಮನಿ, ಚನ್ನಮ್ಮ, ಪ್ರಭಾವತಿ ಚಿತ್ತಕೋಟ, ರಾಜಕುಮಾರ ಮಾಳಗೆ, ಧನರಾಜ ನೀಲಾ, ನಾಗಪ್ಪ ಗೋಗಿ, ಜಯಶ್ರೀ ಚಿಂತಾಮಣಿ, ರೇಣುಕಾ ಎಸ್.ಎಚ್. ಕವನ ವಾಚಿಸಿದರು.
ವೈಷ್ಣವಿ ಅಹಂಕಾರಿ ಪ್ರಾರ್ಥನಾ ಗೀತೆ ಹಾಡಿದರು. ಚಕೋರ ವೇದಿಕೆ ಸಂಚಾಲಕ ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಚಂದ್ರಕಲಾ, ಚನ್ನಮ್ಮ ಅಲ್ಬಾ ನಿರೂಪಿಸಿದರು. ಕರೆಣ್ಣ ದೇವಾಪುರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.